ಕಾವೇರಿ ವಿಚಾರ ನಾವು ನೋಡಿಕೊಳ್ಳುತ್ತೇವೆ, ತಮಿಳುನಾಡು ಶಾಂತಿ ಕಾಪಾಡಬೇಕು: ಸುಪ್ರೀಂ ಕೋರ್ಟ್

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿರ್ವಹಣಾ ಮಂಡಳಿ ರಚನೆ ಮಾಡದ ಹಿನ್ನೆಲೆಯಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಅಸಮಾಧಾನ ಹೊರಹಾಕಿರುವ ಸುಪ್ರೀಂಕೋರ್ಟ್...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿರ್ವಹಣಾ ಮಂಡಳಿ ರಚನೆ ಮಾಡದ ಹಿನ್ನೆಲೆಯಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಅಸಮಾಧಾನ ಹೊರಹಾಕಿರುವ ಸುಪ್ರೀಂಕೋರ್ಟ್, ಕಾವೇರಿ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ, ತಮಿಳುನಾಡು ಮೊದಲು ಶಾಂತಿಯನ್ನು ಕಾಪಾಡಬೇಕೆಂದು ಬುಧವಾರ ಹೇಳಿದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯಕ್ಕೆ ತಮಿಳುನಾಡು ರಾಜ್ಯದ ಪರವಕೀಲ ಉಮಾಪತಿಯವರು ಆಗಮಿಸಿದ್ದರು. ಈ ವೇಳೆ ವಕೀಲರೊಂದಿಗೆ ಮಾತನಾಡಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ತಮಿಳುನಾಡಿನಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. 
ತಮಿಳುನಾಡಿನಲ್ಲಿ ಎಲ್ಲಡೆ ಪ್ರತಿಭಟನೆಗಳೇಕೆ ನಡೆಯುತ್ತಿದೆ? ಕಾವೇರಿ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ. ತಮಿಳುನಾಡಿನ ಜನತೆ ಹಾಗೂ ಅಲ್ಲಿನ ಪಕ್ಷಗಳು ಮೊದಲು ಪ್ರತಿಭಟನೆಗಳನ್ನು ಕೈಬಿಡಬೇಕೆಂದು ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ. 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಏ.9 ರಂದು ವಿಚಾರಣೆ ನಡೆಯಲಿದ್ದು, ಅಂದು ಆದೇಶವನ್ನು ಹೊರಡಿಸಲಾಗುತ್ತದೆ. ತಮಿಳುನಾಡಿನ ಭಾಗಕ್ಕೆ ಬರಬೇಕಿರುವ ನೀರನ್ನು ನೀಡಲಾಗುತ್ತೆ. ತಮಿಳುನಾಡಿನಲ್ಲಿ ಮೊದಲು ಶಾಂತಿ ಸ್ಥಾಪನೆಯಾಗಬೇಕು. ತಮಿಳುನಾಡು ಜನತೆ ಮೊದಲು ಶಾಂತಿಯನ್ನು ಕಾಪಾಡಬೇಕು. ರೈಲುಗಳನ್ನು ತಡೆಹಿಡಿಯಲು ಹಾಗೂ ಪ್ರತಿಭಟನೆ ನಡೆಸುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸೂಚಿಸಿಲ್ಲ ಎಂದು ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com