'ಸುಳು ಸುದ್ದಿ' ವಿರುದ್ಧದ ಕ್ರಮ ಹಿಂಪಡೆದ ಬಳಿಕ ಆನ್ ಲೈನ್ ಮಾಧ್ಯಮಗಳ ಮೇಲೆ ಕೇಂದ್ರದ ಹದ್ದಿನಕಣ್ಣು

ಸುಳ್ಳು ಸುದ್ದಿ ವಿರುದ್ಧದ ಕ್ರಮಕೈಗೊಂಡು ಬಳಿಕ ಯೂಟರ್ನ್ ಹೊಡೆದಿದ್ದ ಕೇಂದ್ರ ಸರ್ಕಾರ ಇದೀಗ ಆನ್ ಲೈನ್ ಮಾಧ್ಯಮಗಳ ಮೇಲೆ ತನ್ನ ಹದ್ದಿನ ಕಣ್ಣಿಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಸುಳ್ಳು ಸುದ್ದಿ ವಿರುದ್ಧದ ಕ್ರಮಕೈಗೊಂಡು ಬಳಿಕ ಯೂಟರ್ನ್ ಹೊಡೆದಿದ್ದ ಕೇಂದ್ರ ಸರ್ಕಾರ ಇದೀಗ ಆನ್ ಲೈನ್ ಮಾಧ್ಯಮಗಳ ಮೇಲೆ ತನ್ನ ಹದ್ದಿನ ಕಣ್ಣಿಡಲು ಮುಂದಾಗಿದೆ.
ಹೌದು..ಆನ್ ಲೈನ್ ಸುದ್ದಿತಾಣ, ಆನ್ ಲೈನ್ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ರಚನೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಏಪ್ರಿಲ್ 4ರಂದು ಕೇಂದ್ರ ಸರ್ಕಾರ ಈ ಸಮಿತಿ ರಚನೆಗೆ ಮುಂದಾಗಿದ್ದು. ಈ ಸಮಿತಿಯಲ್ಲಿ ಕೇಂದ್ರ ಗೃಹ ಇಲಾಖೆ, ಎಲೆಕ್ಟ್ರಾನಿಕ್ಸ್, ಮಾಹಿತಿ ಮತ್ತ ತಂತ್ರಜ್ಞಾನ, ಕಾನೂನು ಸಚಿವಾಲಯ, ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಗಳ ಕಾರ್ಯದರ್ಶಿಗಳು ಸಮಿತಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ.
ಅಂತೆಯೇ ಈ ಸಮಿತಿಯಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಷನ್ ಮತ್ತು ಇಂಡಿಯನ್ ಬ್ರಾಡ್ ಕಾಸ್ಟರ್ಸ್ ಫೆಡರೇಶನ್ ನ ಸದಸ್ಯರೂ ಕೂಡ ಇರಲಿದ್ದಾರೆ. ಈ ಸಮಿತಿ ಆನ್ ಲೈನ್ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೆ ಮತ್ತು ಆನ್ ಲೈನ್ ಮಾಧ್ಯಮಗಳ ಮಾಹಿತಿ ಪ್ರಸಾರದ ಕುರಿತು ನೀತಿ ತಯಾರಿಸಲಿವೆ ಎಂದು ಹೇಳಲಾಗಿದೆ.
ಆನ್ ಲೈನ್ ಮಾಧ್ಯಮ, ಆನ್ ಲೈನ್ ನ್ಯೂಸ್ ಪೋರ್ಟಲ್ ಮತ್ತು ಆನ್ ಲೈನ್ ಕಂಟೆಂಟ್ ಫ್ಲಾಟ್ ಫಾರ್ಮ್ ಗಳ ಕುರಿತು ಈ ಸಮಿತಿ ನೀತಿ ರೂಪಿಸಲಿದೆ. ಮನರಂಜನೆ, ಎನ್ಫೋಟೇನ್ ಮೆಂಟ್, ಸುದ್ದಿ ಮತ್ತು ಮಾಧ್ಯಮ ಸಂಗ್ರಾಹಕರ ಮೇಲೆ ಈ ಸಮಿತಿ ಕಣ್ಣಿಡಲಿದೆ. ಈ ಮಾರ್ಗದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು, ಜಾಹಿರಾತು ಮತ್ತು ಇತರೆ ಪೋಸ್ಚ್ ಗಳ ಮೇಲೆ ಕಣ್ಣಿಟ್ಟು ಅವುಗಳ ಆಧಾರದ ಮೇಲೆ ನಿಯಂತ್ರಕ ನೀತಿ ರೂಪಿಸಲಿವೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಗೋಳಿಸುವುದಾಗಿ ಹೇಳಿ ಸುದ್ದಿಯಾಗಿತ್ತು. ಆದರೆ ಮಧ್ಯ ಪ್ರವೇಶ ಮಾಡಿದ್ದ ಪ್ರಧಾನಿ ಮೋದಿ ಈ ಆದೇಶವನ್ನು ಹಿಂಪಡೆದಿದ್ದರು. ಬಳಿಕ ಯೂಟರ್ನ್ ಹೊಡೆದಿದ್ದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇದೀಗ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com