ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯುತ್ತಿರುವುದಕ್ಕೆ ವ್ಯವಸ್ಥೆ ವೈಫಲ್ಯವೇ ಕಾರಣ: ಫಾರೂಕ್ ಅಬ್ದುಲ್ಲಾ
ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯುತ್ತಲೇ ಇದ್ದು, ಇದಕ್ಕೆ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಭಾನುವಾರ ಹೇಳಿದ್ದಾರೆ...
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ
ಪೂಂಚ್(ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯುತ್ತಲೇ ಇದ್ದು, ಇದಕ್ಕೆ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಭಾನುವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಶ್ಮೀರಿಗರು ಭಾರತದ ಗುಲಾಮರಲ್ಲ. ದೇಶ ಮೊದಲು ತನ್ನ ಘನತೆ ಹಾಗೂ ಗೌರವಗಳನ್ನು ಗೌರವಿಸಬೇಕಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿನ ಪರಿಸ್ಥಿತಿ ಇದೀಗ ಭೀತಿಕರ ವಾತಾವರಣಕ್ಕೆ ತಿರುಗಿದೆ. ಚಿಕ್ಕ ಮಕ್ಕಳು ತಮ್ಮ ಗನ್ ಗಳನ್ನು ಹಿಡಿದು ಸಿದ್ಧರಾಗಿ ನಿಲ್ಲುತ್ತಿದ್ದಾರೆ. ಭಯೋತ್ಪಾದನೆ ಪಾಕಿಸ್ತಾನದಿಂದಲೇ ಬರುತ್ತಿರಬಹುದು. ಆದರೆ, ನಾವು ಅದಕ್ಕೆ ಬೆಂಬಲ ನೀಡದೇ ಹೋದರೆ, ಅದು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಭಯೋತ್ಪಾದಕ ಚಟುವಟಿಕೆಗಳು ಯಶಸ್ವಿಯಾಗುತ್ತಿದೆ ಎಂದರೆ ಅದಕ್ಕೆ ನಮ್ಮ ವ್ಯವಸ್ಥೆಯ ವೈಫಲ್ಯವೇ ಕಾರಣ. ಮೂಲಭೂತವಾಗಿ ರಾಜಕೀಯದಲ್ಲಿರುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಮೊದಲು ಪರಿಹರಿಸಬೇಕಿದೆ.
ನೋಟು ನಿಷೇಧ ಕಾಶ್ಮೀರದಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟಕ್ಕೆ ಅಂತ್ಯ ಹಾಡಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಯುವಕರು ತಮ್ಮ ಕೈಗಳಲ್ಲಿ ಬಂದೂಕುಗಳನ್ನು ಹಿಡಿದು ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಘಟನೆಗಳಿಗೆ ಬೆಂಬಲ ನೀಡಬಾರದು ಎಂದಿದ್ದಾರೆ.