

ನವದೆಹಲಿ : 1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ಆರೋಪಿ ಭೂಗತ ಪಾತಕಿ ಅಬು ಸಲೀಂ ಮೇಲಿನ 2002ರ ಸುಲಿಗೆ ಪ್ರಕರಣದ ತೀರ್ಪುನ್ನು ಪಾಟಿಯಾಲ ಹೌಸ್ ನ್ಯಾಯಾಲಯ ಮುಂದೂಡಿದೆ.
ಪಾತಕಿ ಅಬು ಸಲೀಂ ಮೇಲಿನ ಸುಲಿಗೆ ಪ್ರಕರಣ ಸಂಬಂಧದ ನ್ಯಾಯಾಧೀಶರು ಗೈರಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಎರಡು ವಾರಗಳ ಬಳಿಕ ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಅಬುಸಲೀಂ ವಿರುದ್ಧ ಪ್ರಾಸಿಕ್ಯೂಸನ್ ಬಳಿ ಸಾಕ್ಷ್ಯಾಧಾರ ಇಲ್ಲ ಎಂದು ಇದಕ್ಕೂ ಮುಂಚೆ ಅಬು ಸಲೀಂ ಪರ ವಕೀಲರು ವಾದಿಸಿದ್ದರು.
ಅಬುಸಲೀಂ ಪೋರ್ಚಗಲ್ ನಿಂದ ಭಾರತಕ್ಕೆ 2005ರಲ್ಲಿ ಹಿಂತಿರುಗಿದ್ದು, ಈ ಪ್ರಕರಣದಲ್ಲಿ ಸತ್ಯವನ್ನು ಮರೆಮಾಚಲಾಗಿದೆ ಎಂದು ಅವರು ಆರೋಪಿಸಿದ್ದರು.
2002ರಲ್ಲಿ ದೆಹಲಿಯ ಉದ್ಯಮಿ ಅಶೋಕ್ ಗುಪ್ತಾ ಅವರಿಂದ 5 ಕೋಟಿ ರೂ ಸುಲಿಗೆ ಮಾಡಿರುವ ಪ್ರಕರಣ ಇದಾಗಿದ್ದು,ಈ ಸಂಬಂಧ ಅಬು ಸಲೀಂ ವಿಚಾರಣೆ ಎದುರಿಸುತ್ತಿದ್ದಾರೆ.
ಈ ಮಧ್ಯೆ ಮುಂಬೈ ಸರಣಿ ಬಾಂಬ್ ಸ್ಪೋಟ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇರೆಗೆ ಅಬುಸಲೀ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.