ಮಾಜಿ ರೇಡಿಯೊ ಜಾಕಿ ಹತ್ಯೆ: ಬೆಂಗಳೂರು ಮೂಲದ ಕೇರಳ ಟೆಕ್ಕಿ ಬಂಧನ

ಮಾಜಿ ರೇಡಿಯೊ ಜಾಕಿ ರಾಜೇಶ್ ಅಲಿಯಾಸ್ ರಸಿಕನ್ ರಾಜೇಶ್ ಕೊಲೆ ಪ್ರಕರಣದ ತನಿಖೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಮಾಜಿ ರೇಡಿಯೊ ಜಾಕಿ ರಾಜೇಶ್ ಅಲಿಯಾಸ್ ರಸಿಕನ್ ರಾಜೇಶ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಕೊಲೆ ಮಾಡಲು ಸಹಾಯ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ 22 ವರ್ಷದ ಯುವಕನನ್ನು ಬಂಧಿಸುವ ಮೂಲಕ ಪ್ರಮುಖ ಮಾಹಿತಿ ಹೊರಹಾಕಿದೆ.

ಓಚಿರಾ ಮೂಲದ ಯಾಸಿರ್ ಅಬೂಬಕ್ಕರ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಈತ ಕೊಲೆಯಲ್ಲಿ ಭಾಗಿಯಾಗಿದ್ದಾನೆಂಬ ಪ್ರಬಲ ಸಾಕ್ಷಿಗಳು ಸಿಕ್ಕಿದ ಹಿನ್ನೆಲೆಯಲ್ಲಿ ಕಳೆದ ಶನಿವಾರ ಆತನನ್ನು ಕಸ್ಟಡಿಗೆ ಕರೆದೊಯ್ಯಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿ ಸಾಲಿಹ್ ಬಿನ್ ಜಲಾಲ್ ಅಲಿಯಾಸ್ ಅಲಿಬಾಯ್ ಯಾಸಿರ್ ಗೆ ಹತ್ತಿರದ ಸಂಬಂಧಿಕನಾಗಿದ್ದು ಈತ ಖತಾರ್ ನಲ್ಲಿ ಅಡಗಿ ಕುಳಿತಿದ್ದಾನೆ ಎಂದು ನಂಬಲಾಗಿದೆ ಎಂದು ಕಿಲಿಮನೂರಿನ ಮುಖ್ಯ ಇನ್ಸ್ ಪೆಕ್ಟರ್ ವಿ.ಎಸ್.ಪ್ರದೀಪ್ ಕುಮಾರ್ ತಿಳಿಸಿದ್ದಾರೆ. ಕತಾರ್ ನಿಂದ ಭಾರತಕ್ಕೆ ಬಂದ ಸಾಲಿಹ್ ಬೆಂಗಳೂರಿನಲ್ಲಿ ಯಾಸಿರ್ ನನ್ನು ಭೇಟಿ ಮಾಡಿ ರಾಜೇಶ್ ಕೊಲೆಗೆ ಸಂಚು ರೂಪಿಸಿದ್ದಾರೆ. ಈ ಸಂದರ್ಭದಲ್ಲಿ ಸಾಲಿಹ್ ಓಚಿರಾ ಮೂಲದ ತಂಡಕ್ಕೆ ಗುತ್ತಿಗೆ ನೀಡಿದೆ. ಹೀಗಾಗಿ ಕೊಲೆಯಲ್ಲಿ ಯಾಸಿರ್ ನ ಪಾಲ್ಗೊಳ್ಳುವಿಕೆ ಪಿತೂರಿ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲದೆ ಕೊಲೆ ಮಾಡಿದ ನಂತರ ಕಾರನ್ನು ಯಾಸಿರ್ ಗೆ ನೀಡಲಾಗಿದೆ. ಅಪರಾಧಿ ಬಗ್ಗೆ ನಮಗೆ ಪ್ರಮುಖ ಮಾಹಿತಿ ಸಿಕ್ಕಿದ್ದು ಬೇರೆ ರಾಜ್ಯಗಳಿಗೂ ನಮ್ಮ ತಂಡ ತನಿಖೆಗೆ ಹೋಗಿದೆ. ಸದ್ಯದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಮುಖ್ಯ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com