ಸೂರತ್ ನಲ್ಲಿ 'ಹತ್ಯಾಚಾರ'ಕ್ಕೊಳಗಾಗಿದ್ದ ಬಾಲಕಿ ಆಂಧ್ರಪ್ರದೇಶ ಮೂಲದವಳು?

ಇತ್ತೀಚೆಗೆ ಸೂರತ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದ ಬಾಲಕಿ ಆಂಧ್ರ ಪ್ರದೇಶ ಮೂಲದವಳೆಂಬ ಶಂಕೆ ಮೂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸೂರತ್: ಇತ್ತೀಚೆಗೆ ಸೂರತ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದ ಬಾಲಕಿ ಆಂಧ್ರಪ್ರದೇಶ ಮೂಲದವಳೆಂಬ ಶಂಕೆ ಮೂಡಿದೆ.
ಆಂಧ್ರಪ್ರದೇಶ ಮೂಲದ ದಂಪತಿಗಳು ಸೂರತ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ  ಬಾಲಕಿ ತಮ್ಮ ಪುತ್ರಿ ಎಂದು ಹೇಳಿಕೊಂಡಿದ್ದು, ಈಗಾಗಲೇ ಸೂರತ್ ಗೆ ದೌಡಾಯಿಸಿದ್ದಾರೆ. ಪ್ರಸ್ತುತ ದಂಪತಿಗಳ ಭೇಟಿ ಮಾಡಿರುವ ಸೂರತ್ ಪೊಲೀಸ್ ಮುಖ್ಯಸ್ಥ ಸತೀಶ್ ಶರ್ಮಾ ಅವರು, ಬಾಲಕಿಯ ಮೃತದೇಹದ ಡಿಎನ್ ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಡಿಎನ್ಎ ಪರೀಕ್ಷೆ ವರದಿ ಕೈ ಸೇರಿದ ಬಳಿಕ ಬಾಲಕಿಯ ಪೂರ್ವಾಪರ ತಿಳಿಯಲಿದ ಎಂದು ಅವರು ಹೇಳಿದ್ದಾರೆ. 
ಪೊಲೀಸರಿಗೆ ದಂಪತಿಗಳು ನೀಡಿರುವ ಮಾಹಿತಿಯಂತೆ ಕಳೆದ ಅಕ್ಟೋಬರ್ ನಲ್ಲೇ ತಮ್ಮ ಪುತ್ರಿ ನಾಪತ್ತೆಯಾಗಿದ್ದಳು, ಈ ಸಂಬಂಧ ಆಂಧ್ರ ಪ್ರದೇಶ ಪೊಲೀಸರ ಬಳಿ ದೂರು ದಾಖಲಿಸಲಾಗಿತ್ತು. ಇದೀಗ ಸೂರತ್ ನಲ್ಲಿ ಪತ್ತೆಯಾಗಿರುವ ಬಾಲಕಿಯ ದೇಹ ತಮ್ಮ ಮಗಳನ್ನು ಹೋಲುತ್ತಿರುವಂತಿದೆ ಎಂದು ದಂಪತಿಗಳು ಹೇಳಿದ್ದಾರೆ. ಇತ್ತೀಚೆಗಷ್ಟೇ ಸೂರತ್ ಪೊಲೀಸರು ಕೊಲೆಗೀಡಾಗಿದ್ದ ಬಾಲಕಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಪೊಲೀಸರ ಈ ಪೋಸ್ಚ್ ನೋಡಿಯೇ ತಾವು ಸೂರತ್ ಬಂದಿರುವುದಾಗಿ ದಂಪತಿಗಳು ತಿಳಿಸಿದ್ದಾರೆ.
ಇನ್ನು ಕಳೆದ ವಾರ ಸೂರತ್ ನಲ್ಲಿ ಪತ್ತೆಯಾಗಿದ್ದ ಬಾಲಕಿ ಮೃತ ದೇಹದ ಮೇಲೆ ಸುಮಾರು 86 ಗಾಯದ ಗುರುತುಗಳಿದ್ದವು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಕಾಶ್ಮೀರದ ಕಥುವಾದಲ್ಲಿ ನಡೆದಿದ್ದ ಆಸಿಫಾ ಎಂಬ ಬಾಲಕಿಯ ಮೇಲಿನ ಅತ್ಯಾಚಾರ, ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಬಳಿಕ ಸೂರತ್ ನಲ್ಲಿ ನಡೆದಿದ್ದ ಈ ಪ್ರಕರಣ ಕೂಡ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com