ಎಎಂಯು ಕಾಯ್ದೆಗೆ 1948 ರಲ್ಲಿ ತಿದ್ದುಪಡಿ ತರಲಾಯಿತು. ಇದಾದ ಬಳಿಕ 1950 ರಲ್ಲಿ ರಾಷ್ಟ್ರಪತಿಗಳ ಆದೇಶದ ಮೂಲಕ ಮುಸ್ಲಿಮ್ ದಲಿತರು ಎಸ್ ಸಿ/ಎಸ್ ಟಿ ಕೋಟಾದಲ್ಲಿ ಸಿಗುವ ಮೀಸಲಾತಿಯಿಂದ ವಂಚಿತರಾದರು. ಹಶಿಂಪುರಾ, ಮಲ್ಯನಾ, ಮೀರತ್, ಮುಜಫರ್ನಗರ, ಭಾಗಲ್ಪುರ್, ಮೊರಾದಾಬಾದ್ ಮತ್ತು ಅಲಿಗಢ್ ಗಳಲ್ಲಿ ಮುಸ್ಲಿಂ ವಿರೋಧಿ ದಂಗೆಗಳಾಗಿದ್ದು, ಬಾಬ್ರಿ ಮಸೀದಿ ಧ್ವಂಸವಾಗಿದ್ದು ಎಲ್ಲವೂ ಕಾಂಗ್ರೆಸ್ ನ ಅವಧಿಯಲ್ಲೇ, ಈ ರಕ್ತದ ಕಲೆಗಳನ್ನು ಕಾಂಗ್ರೆಸ್ ಹೇಗೆ ಅಳಿಸುತ್ತದೆ ಎಂದು ವಿದ್ಯಾರ್ಥಿ ಅಮೀರ್ ಸಲ್ಮಾನ್ ಖುರ್ಷಿದ್ ಅವರನ್ನು ಪ್ರಶ್ನಿಸಿದ್ದಾರೆ.