ಸಾಲಕ್ಕಾಗಿ 'ಕ್ಯಾನ್ಸಲ್ಡ್' ಚೆಕ್ ನೀಡಿದ ದೆಹಲಿ ಮಹಿಳೆ; ಅದಕ್ಕಾಗಿ ಆಕೆ ತೆತ್ತ ಬೆಲೆ ರೂ.3.8 ಲಕ್ಷ

ಕಳೆದ ತಿಂಗಳು, ಪಶ್ಚಿಮ ದೆಹಲಿಯ ನಿವಾಸಿಯೊಬ್ಬರಿಗೆ ಏಜೆಂಟ್ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಾಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಮಹಿಳೆಯೊಬ್ಬರು ಸಾಲಕ್ಕಾಗಿ 'ಕ್ಯಾನ್ಸಲ್ಡ್' ಚೆಕ್ ನೀಡಿ ಸುಮಾರು 3.80 ಲಕ್ಷ ರು ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಕಳೆದ ತಿಂಗಳು, ಪಶ್ಚಿಮ ದೆಹಲಿಯ ನಿವಾಸಿಯೊಬ್ಬರಿಗೆ ಏಜೆಂಟ್ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಾಲ ಕೊಡಿಸುವುದಾಗಿ ಹೇಳಿದ್ದಾಳೆ, ಹೀಗಾಗಿ ಮಹಿಳೆ ಆಕೆಗೆ ತಮ್ಮ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ನೀಡಿದ್ದಾರೆ.
ದಾಖಲೆ ಜೊತೆಗೆ ಸಹಿ ಮಾಡಿದ ಚೆಕ್ ನೀಡಿದ್ದಾರೆ ಹಾಗೆಯೇ ಆಕೆ ಚೆಕ್ ಕ್ಯಾನ್ಸಲ್ ಮಾಡಿದ್ದಾಳೆ ಎಂದು ಮಹಿಳೆ ನಂಬಿದ್ದಾರೆ, ಚೆಕ್ ತೆಗೆದುಕೊಂಡ ಏಜೆಂಟ್ ಚೆಕ್ ಕ್ಯಾನ್ಸಲ್ ಮಾಡದೇ ಫಲಾನುಭವಿಗಳ ಹೆಸರಿನ ಕೆಳಗೆ ಒಂದು ಗೆರೆ ಹಾಕಿ, ಚೆಕ್ ಕ್ಯಾನ್ಸಲ್ ಮಾಡಿರುವುದಾಗಿ ಮನವರಿಕೆ ಮಾಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,
ಹಣ ಕಳೆದುಕೊಂಡ ಮಹಿಳೆಯ ಗುರುತನ್ನು ಪೊಲೀಸರು ಬಹಿರಂಗ ಪಡಿಸಿಲ್ಲ, ಚೆಕ್ ತೆಗೆದುಕೊಂಡು ಹೋದ 30 ನಿಮಿಷದಲ್ಲಿ ಮಹಿಳೆಯ ಖಾತೆಯಿಂದ 3.8 ಲಕ್ಷ ರು ಹಣ ಡೆಬಿಟ್ ಆಗಿರುವ ಸಂಬಂಧ ಆಕೆಗೆ ಸಂದೇಶ ಬಂದಿದೆ.
ಕೂಡಲೇ ಆಕೆ ಬ್ಯಾಂಕ್ ಗೆ ಬಂದು ವಿಚಾರಿಸಿದ್ದಾರೆ, ಆದರೆ ತಾವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬ್ಯಾಂಕ್ ನವರು ಹೇಳಿದ್ದಾರೆ, ಜೊತೆಗೆ ಚೆಕ್ ಮೇಲೆ ನಿಮ್ಮ ಸಹಿ ಕೂಡ ಇತ್ತು ಎಂದು ಹೇಳಿದ್ದಾರೆ. ಹೀಗಾಗಿ ಆಕೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. 
ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೀಪಕ್ ಅರೋರಾನನ್ನು ಬಂಧಿಸಿದ್ದಾರೆ. ತನ್ನ ಪತ್ನಿ ಶೋಭನಾ ಜೊತೆ ಸೇರಿ ಈ ರೀತಿ ಮಾಡಲು ಯೋಜನೆ ರೂಪಿಸಿದ್ದಾಗಿ ಆತ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಪತ್ನಿಯ ವೈದ್ಯಕೀಯ ವೆಚ್ಚ ಭರಿಸುವ ಉದ್ದೇಶದಿಂದ ಈ ರೀತಿ ಮಾಡಿದೆ ಎಂದು ಹೇಳಿದ್ದಾನೆ.
ಹಣ ಡ್ರಾ ಮಾಡಿದ ಬಳಿಕ ಅದರಲ್ಲಿ ಅರ್ಧ ಹಣವನ್ನು ತನ್ನ ಪತ್ನಿಯ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಶಹರನಾಪುರ ಕ್ಕಾಗಿ ಕಳುಹಿಸಿರುವುದಾಗಿ ತಿಳಿಸಿದ್ದಾರೆ. 
ಐಪಿಎಲ್ ಪಂದ್ಯದ ಬುಕ್ಕಿಗಳ ಪರಿಚಯವಿದ್ದು ಉಳಿದ ಹಣವನ್ನು ಬೆಟ್ಟಿಂಗ್ ನಲ್ಲಿ ಕಟ್ಟಿದ್ದಾನೆ, ಕೊನೆಗೂ ಆತನನ್ನು  ವಶಕ್ಕೆ ಪಡೆದಿರುವ ವೊಲೀಸರು ಆತನಿಂದ 60 ಸಾವಿರ  ರು ಜಪ್ತಿ ಮಾಡಿದ್ದಾರೆ, ಆತನ ಪತ್ನಿ ಶೋಭನಾಳನ್ನು ಪೊಲೀಸರು ಇನ್ನು ಬಂಧಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com