ಭಗವಾನ್, ಅಲ್ಲಾ ಹೆಸರಿನಲ್ಲಿ ಮಕ್ಕಳ ಜನನ: ಜನಸಂಖ್ಯಾಸ್ಫೋಟದ ಕುರಿತು ರಾಜ್ಯಸಭೆಯಲ್ಲಿ ಚರ್ಚೆ

ಆ.06 ರ ರಾಜ್ಯಸಭಾ ಕಲಾಪದಲ್ಲಿ ಜನಸಂಖ್ಯಾಸ್ಫೋಟದ ಕುರಿತು ಚರ್ಚೆ ನಡೆದಿದ್ದು, ಜನಸಂಖ್ಯೆ ಬೆಳವಣಿಗೆ ನಿಯಂತ್ರಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸಂಸದರು ಆಗ್ರಹಿಸಿದ್ದಾರೆ.
Children being born in the name of 'Bhagwan', 'Allah': Rajya Sabha debates population explosion
Children being born in the name of 'Bhagwan', 'Allah': Rajya Sabha debates population explosion
ನವದೆಹಲಿ: ಆ.06 ರ ರಾಜ್ಯಸಭಾ ಕಲಾಪದಲ್ಲಿ ಜನಸಂಖ್ಯಾಸ್ಫೋಟದ ಕುರಿತು ಚರ್ಚೆ ನಡೆದಿದ್ದು, ಜನಸಂಖ್ಯೆ ಬೆಳವಣಿಗೆ ನಿಯಂತ್ರಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸಂಸದರು ಆಗ್ರಹಿಸಿದ್ದಾರೆ. 
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿರುವ ಬಿಜೆಪಿ ಸಂಶದ ಅಶೋಕ್ ಬಾಜಪೇಯಿ, 2022 ರ ವೇಳೆಗೆ ಭಾರತ ಜನಸಂಖ್ಯೆ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಲಿದೆ. 2050 ರ ವೇಳೇಗೆ 1.66 ಬಿಲಿಯನ್ ಜನರು ಭಾರತದಲ್ಲಿರಲಿದ್ದಾರೆ. 
ಜನಸಂಖ್ಯೆ ಏರಿಕೆಯಿಂದ ಅಭಿವೃದ್ಧಿ ಕಾರ್ಯಗಳಿಗೂ ಪರಿಣಾಮ ಬೀರಲಿದೆ ಎಂದು ಅಶೋಕ್ ಬಾಜಪೇಯಿ ಆತಂಕ ವ್ಯಕ್ತಪಡಿಸಿದ್ದಾರೆ. ಅಶೋಕ್ ಬಾಜಪೇಯಿ ಅವರ ಪ್ರಸ್ತಾವನೆಗೆ ಬೆಂಬಲ ಸೂಚಿಸಿರುವ ಬಿಜೆಪಿಯ ಮತ್ತೋರ್ವ ಸಂಸದ ವಿಜಯ್ ಪಾಲ್ ಸಿಂಗ್ ತೋಮರ್ ಭಾರತ ಸ್ವಾತಂತ್ರ್ಯ ಪಡೆದಾಗ 36 ಕೋಟಿ ಜನಸಂಖ್ಯೆ ಇತ್ತು, ಈಗ 135 ಕೋಟಿ ದಾಟಿದೆ. ಪ್ರತಿ ವರ್ಷ 2 ಕೋಟಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಭಗವಾನ್, ಅಲ್ಲಾ ಹೆಸರಿನಲ್ಲಿ ಮಕ್ಕಳ ಜನನವಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com