ಪ್ರಧಾನಿ ಮೋದಿ ಕುರಿತು ಶಶಿ ತರೂರ್ ಟೀಕೆ: ಕ್ಷಮೆಯಾಚಿಸುವಂತೆ ಬಿಜೆಪಿ ಆಗ್ರಹ

ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಟೀಕೆ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕೆಂದು ಮಂಗಳವಾರ ಆಗ್ರಹಿಸಿದೆ...
ಸಚಿವ ಕಿರಣ್ ರಿಜಿಜು
ಸಚಿವ ಕಿರಣ್ ರಿಜಿಜು
Updated on: 
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಟೀಕೆ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕೆಂದು ಮಂಗಳವಾರ ಆಗ್ರಹಿಸಿದೆ. 
ಶಶಿ ತರೂರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ನೀಡಿರುವ ಸಚಿವ ಕಿರಣ್ ರಿಜಿಜು ಅವರು, ಶಶಿ ತರೂರ್ ಹೇಳಿಕೆ ಕುರಿತು ಕಾಂಗ್ರೆಸ್ ಕೂಡಲೇ ಕ್ಷಣೆಯಾಚಿಸಬೇಕು. ಟೋಪಿ ಧರಿಸುವುದು ನಮ್ಮ ಸಂಸ್ಕೃತಿ. ಅದು ನಮ್ಮಸಂಸ್ಕೃತಿಯ ಗುರ್ತಿಕೆಯಾಗಿದೆ ಎಂದು. ತರೂರ್ ತಮ್ಮ ಹೇಳಿಕೆಯಿಂದ ಈಶಾನ್ಯ ಭಾರತದ ಜನರಿಗೆ ಅವಮಾನ ಮಾಡಿದ್ದಾರೆಂದು ಹೇಳಿದ್ದಾರೆ. 
ವಿಚಾರ ಸಂಕಿರಣವೊಂದರಲ್ಲಿ ನಿನ್ನೆಯಷ್ಟೇ ಮಾತನಾಡಿದ ಶಶಿ ತರೂರ್ ಅವರು, ಪ್ರಧಾನಿ ಮೋದಿ ಕುರಿತು ಟೀಕೆ ಮಾಡಿದ್ದರು. 
ದೇಶ-ವಿದೇಶಗಳ ಪ್ರವಾಸದ ಸಂದರ್ಭದಲ್ಲಿ ಚಿತ್ರ-ವಿಚಿತ್ರ ಟೋಪಿಗಳನ್ನು ಧರಿಸುವ ಮೋದಿಯವರು ಮುಸ್ಲಿಮರ ಟೋಪಿಯನ್ನೇಕೆ ನಿರಾಕರಿಸುತ್ತಾರೆ ಎಂದು ಪ್ರಶ್ನಿಸದ್ದರು. ತರೂರ್ ಅವರ ಈ ಮಾತುಗಳು ಬೇರೆಯದೇ ರೀತಿಯ ಬಣ್ಣ ಪಡೆದುಕೊಂಡಿದ್ದು. ವಿವಾದಕ್ಕೆ ಕಾರಣವಾಗಿದೆ. 
ಮೋದಿಯವರು ಚಿತ್ರ ಹಾಗೂ ವಿಚಿತ್ರ, ನಗೆಬರಿಸುವ ಉಡುಪು ಧರಿಸುವುದನ್ನು ಎಲ್ಲರೂ ನೋಡಿಯೇ ಇದ್ದೀರಿ. ಆದರೆ, ಒಂದು ಟೋಪಿ ಧರಿಸಲು ಅವರು ನಿರಾಕರಿಸುತ್ತಾರೆ. ಅವರೇಕೆ ಹಸಿರು ಬಣ್ಣವನ್ನು ಧರಿಸುವುದಿಲ್ಲ ಎಂದು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com