ಸೋನಿಯಾ ಗಾಂಧಿ ತಮ್ಮ ಮಗ ರಾಹುಲ್ ಗಾಂಧಿ ಅವರ ಕೈಯಲ್ಲಿ ಸ್ಟಾಲಿನ್ ಗೆ ಕಳುಹಿಸಿರುವ ಪತ್ರದಲ್ಲಿ ನಿಮ್ಮ ಗೌರವಾನ್ವಿತ ಮತ್ತು ಪ್ರೀತಿಯ ತಂದೆ ವಿಧಿವಶರಾಗಿರುವುದಕ್ಕೆ ನಾನು ದುಃಖಿತನಾಗಿದ್ದೇನೆ. ಕರುಣಾನಿಧಿ ನಿಧನ ಬಹಳ ನಷ್ಟವನ್ನುಂಟ್ಟು ಮಾಡಿದೆ. ಅವರು ಯಾವಾಗಲೂ ನನಗೆ ಕರುಣೆಯನ್ನು ಮತ್ತು ಪರಿಗಣನೆಯನ್ನು ತೋರಿಸಿದರು. ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.