ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಚೀನಾ ರಾಯಭಾರಿ ಲುವೊ ಝಾಹೋಯಿಯಿ ಅವರು, ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧದ ಪುಸ್ತಕದಲ್ಲಿ ಡೊಕ್ಲಾಂ ಎಂಬ ಪುಟವನ್ನು ನಾವು ತಿರುವಿ ಹಾಕಿ ಮುಂದಿನ ಪುಟಕ್ಕೆ ಸಾಗಿದ್ದೇವೆ. ಅದು ಈಗ ಮುಗಿದ ಅಧ್ಯಾಯ. ಡೊಕ್ಲಾಂ ಹೊರತಾಗಿಯೂ ಭಾರತ ಮತ್ತು ಚೀನಾ ಸಾಕಷ್ಟು ವಿಚಾರಗಳಲ್ಲಿ ಸೌಹಾರ್ಧ ಸಂಬಂಧ ಹೊಂದಿವೆ. ಕೇವಲು ಒಂದೇ ಒಂದು ವಿಚಾರದಿಂದ ಈ ಸಂಬಂಧ ಹಳಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಡೊಕ್ಲಾಂ ವಿಚಾರದ ಬಳಿಕವೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಒಂದೇ ವರ್ಷದಲ್ಲಿ ಸಾಕಷ್ಟು ಭಾರಿ ಭೇಟಿಯಾಗಿದ್ದಾರೆ. ಇದು ಉಭಯ ದೇಶಗಳ ನಾಯಕರಿಗೆ ಪರಸ್ಪರ ಇರುವ ಗೌರವ ಮತ್ತು ನಂಬಿಕೆಗೆ ಸಾಕ್ಷಿ ಎಂದು ಹೇಳಿದ್ದಾರೆ.