ನಟ ವಿಕ್ರಂ ಪುತ್ರನ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲು!

ತಮಿಳಿನ ಖ್ಯಾತ ನಟ ವಿಕ್ರಂ ಪುತ್ರ ಧ್ರುವ ರಸ್ತೆ ಬದಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದು ಈ ಸಂಬಂಧ ಧ್ರುವ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಿಸಲಾಗಿದೆ...
ವಿಕ್ರಂ, ಧ್ರುವ
ವಿಕ್ರಂ, ಧ್ರುವ
ಚೆನ್ನೈ: ತಮಿಳಿನ ಖ್ಯಾತ ನಟ ವಿಕ್ರಂ ಪುತ್ರ ಧ್ರುವ ರಸ್ತೆ ಬದಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದು ಈ ಸಂಬಂಧ ಧ್ರುವ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಿಸಲಾಗಿದೆ. 
ಭಾನುವಾರ ಬೆಳಗ್ಗೆ ಚೆನ್ನೈನ ತೈನಮ್ ಪೇಟ್ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಆಟೋ ರಿಕ್ಷಾಗಳಿಗೆ ಗುದ್ದಿದ್ದಾರೆ. ಅಪಘಾತದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಕಾರು ವೇಗವಾಗಿ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಆಟೋಗಳಿಗೆ ಗುದ್ದಿದ್ದಾರೆ. ಅಪಘಾತ ವೇಳೆ ಧ್ರುವ ಹಾಗೂ ಸ್ನೇಹಿತರಿಬ್ಬರು ಪ್ರಯಾಣಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com