ಆಗಸ್ಟ್ 23 ಕ್ಕೆ ಬಕ್ರೀದ್ ಆಚರಣೆ: ದೆಹಲಿ ಜಾಮಾ ಮಸೀದಿ ಹೇಳಿಕೆ

ಈದ್ ಅಲ್-ಅಧಾ(ಬಕ್ರೀದ್) ಹಬ್ಬವನ್ನು ದೇಶಾದ್ಯಂತ ಆಗಸ್ಟ್ 23 ರಂದು ಆಚರಿಸಲಾಗುತ್ತದೆ ಎಂದು ಭಾನುವಾರ ದೆಹಲಿಯ ಜಾಮಾ ಮಸೀದಿ ಹೇಳಿಕೆ ತಿಳಿಸಿದೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಈದ್ ಅಲ್-ಅಧಾ(ಬಕ್ರೀದ್) ಹಬ್ಬವನ್ನು ದೇಶಾದ್ಯಂತ ಆಗಸ್ಟ್ 23 ರಂದು ಆಚರಿಸಲಾಗುತ್ತದೆ ಎಂದು ಭಾನುವಾರ ದೆಹಲಿಯ ಜಾಮಾ ಮಸೀದಿ ಹೇಳಿಕೆ ತಿಳಿಸಿದೆ
ಬಕ್ರೀದ್ ಅಥವಾ ಈದ್ ಅಲ್-ಅಧಾ ತ್ಯಾಗದಸಂಕೇತವಾದ ಹಬ್ಬವಾಗಿದ್ದು ಅಂದು ವಿಶೇಷವಾದ ಪ್ರಾರ್ಥನೆ, ಶುಭಾಶಯ ವಿನಿಮಯ, ಉಡುಗೊರೆಗಳನ್ನು ನೀಡುವ ಮೂಲಕ ವಿಶ್ವಾದ್ಯಂತ ಮುಸ್ಲಿಮರು ಸಂಭ್ರಮಿಸುತ್ತಾರೆ.
ಈ ದಿನ ಮುಸ್ಲಿಮರು ಕುರಿ ಅಥವಾ ಮೇಕೆಯ ಮಾಂಸವನ್ನು ತಮ್ಮ ಕುಟುಂಬ, ನೆರೆಮನೆ ಅಥವಾ ಬಡವರೊಡನೆ ಹಂಚಿಕೊಳ್ಳುತ್ತಾರೆ. ಜಗತ್ತಿನಾದ್ಯಂತ ಈ ಆಚರಣೆಯನ್ನು ವಿವಿಧ ರಾಷ್ಟ್ರಗಳಲ್ಲಿ ವಿವಿಧ ದಿನಾಂಕಗಳಂದು ಆಚರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com