ವಾಜಪೇಯಿ ಮತ್ತು ಅವರ ತಂದೆ ಇಬ್ಬರೂ ಕ್ಲಾಸ್ ಮೇಟ್ಸ್.. ಅಚ್ಚರಿಯಾದರೂ ಇದು ಸತ್ಯ!

ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ವಿದ್ಯಾಭ್ಯಾಸ ಸಂದರ್ಭದಲ್ಲಿ ತಮ್ಮ ತಂದೆಗೆ ಸಹಪಾಠಿಯಾಗಿದ್ದರು ಎಂದರೆ ನಿಮಿಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ..
ವಾಜಪೇಯಿ ಅವರ ಕುಟುಂಬ
ವಾಜಪೇಯಿ ಅವರ ಕುಟುಂಬ
Updated on: 
ಲಖನೌ: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ವಿದ್ಯಾಭ್ಯಾಸ ಸಂದರ್ಭದಲ್ಲಿ ತಮ್ಮ ತಂದೆಗೆ ಸಹಪಾಠಿಯಾಗಿದ್ದರು ಎಂದರೆ ನಿಮಿಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ..
ವಾಜಪೇಯಿ ಅವರ ರಾಜಕೀಯ ಯಾನ ಎಷ್ಟು ರೋಚಕವೋ, ಅವರ, ವೈಯಕ್ತಿಕ ಜೀವನದಲ್ಲಿ ನಡೆದ ಘಟನಾವಳಿಗಳು ಅಷ್ಟೇ ಕುತೂಹಲಕಾರಿ. ವಾಜಪೇಯಿ ಮತ್ತು ಅವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ ಅವರು ಒಟ್ಟಿಗೆ ಓದಲು ಹೋಗುತ್ತಿದ್ದದ್ದು ಆ ಕೌತುಗಳಲ್ಲೊಂದು!
ಈ ಬಗ್ಗೆ ಮಾಹಿತಿ ನೀಡಿರುವ ವಾಜಪೇಯಿ ಅವರ ಸಹಪಾಠಿ ಮತ್ತು ಸ್ನೇಹಿತ ರಾಮ್​ ಮೋಹನ್​ ಸಿಂಗ್​ ಅವರು, 'ವಾಜಪೇಯಿ ಮತ್ತು ಅವರ ತಂದೆ ಕೃಷ್ಣ ವಾಜಪೇಯಿ ಅವರು ಕಾನ್ಪುರದ ಡಿಎವಿ ಕಾಲೇಜಿನಲ್ಲಿ ಕಾನೂನು ಪದವಿಗಾಗಿ ಒಟ್ಟಿಗೆ ಅರ್ಜಿ ಸಲ್ಲಿಸಿದ್ದರು. ಪದವಿಗೆ ಒಟ್ಟಿಗೆ ದಾಖಲಾದರೂ ಕೂಡ. ಅವರಿಬ್ಬರು ಒಂದೇ ತರಗತಿಗೆ ಹೋಗುತ್ತಿದ್ದದ್ದೂ ಅಲ್ಲದೆ, ಡಿಎವಿ ಕಾಲೇಜಿನ ಬಾಲಕರ ವಸತಿಗೃಹದಲ್ಲಿ ಒಟ್ಟಿಗೇ ವಾಸವಿದ್ದರು. ತಂದೆಗೆ ವಿಧೇಯರಾಗಿದ್ದ ವಾಜಪೇಯಿ, ತಂದೆಯೊಂದಿಗೇ ಉಳಿದುಕೊಳ್ಳಲು ಬಯಸುತ್ತಿದ್ದರು ಎಂದು ಹೇಳಿದ್ದಾರೆ.
ಮುಜುಗರ ತಡೆಗೆ ವಾಜಪೇಯಿ ರೂಪಿಸಿದ್ದ ಮಾಸ್ಟರ್ ಪ್ಲಾನ್ ವಿಫಲವಾಗಿತ್ತು
ಇನ್ನು ತಮ್ಮ ತಂದೆಯೊಂದಿಗೇ ಕಾನೂನು ಪದವಿ ಅಭ್ಯಸಿಸುತ್ತಿದ್ದ ವಾಜಪೇಯಿ ಅವರಿಗೆ ತಂದೆ ಜತೆ ತರಗತಿಯಲ್ಲಿ ಕುಳಿತುಕೊಳ್ಳುವುದು ಮಾತ್ರ ಭಾರಿ ಮುಜುಗರ ಉಂಟು ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ವಾಜಪೇಯಿ ಒಂದು ಯೋಜನೆ ರೂಪಿಸಿದ್ದರು. ಸೋಮವಾರ ತಾವು ತರಗತಿಗೆ ಬಂದರೆ, ಮಂಗಳವಾರ ತಂದೆ ಕೃಷ್ಣ ಅವರು ತರಗತಿಗೆ ಬರುವುದು ಆ ಯೋಜನೆಯಾಗಿತ್ತು. ಅದರೆ, ಇದು ಸಫಲವಾಗಲಿಲ್ಲ. ಬೇಸರದ ಸಂಗತಿಯೆಂದರೆ, ತಂದೆಯ ಜತೆಗೇ ಕಾನೂನು ಪದವಿಗೆ ದಾಖಲಾಗಿದ್ದ ವಾಜಪೇಯಿ ಅವರು ಕೊನೆಗೂ ಪದವಿ ಪೂರ್ಣಗೊಳಿಸಲೇ ಇಲ್ಲ ಎಂದು ರಾಮ್ ಮೋಹನ್ ಸಿಂಗ್ ಹೇಳಿದ್ದಾರೆ.
ರಾಮ್ ಮೋಹನ್ ಸಿಂಗ್ ಅವರು, ವಾಜಪೇಯಿ ಅವರೊಂದಿಗೆ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಇನ್ನು ಬಾಲಕರ ವಸತಿ ಗೃಹದಲ್ಲಿ ತಂದೆಯ ಜತೆಗೇ ಇದ್ದ ವಾಜಪೇಯಿ ಅವರು, ಸ್ನೇಹಿತರ ಮೂದಲಿಕೆಗೆ ಅಂಜಿ ಕೊಠಡಿ ಬದಲಿಸಿದ್ದರು ಎಂದು ಅವರನ್ನು ಹತ್ತಿರದಿಂದ ನೋಡಿದ್ದವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com