ಇದೇ ಮೊದಲ ಬಾರಿಗೆ ಭಾರತ-ಪಾಕ್ ಸೇನೆಗಳು ಒಟ್ಟಿಗೆ ಸಮರಾಭ್ಯಾಸ!
ಉಗ್ರರ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಸೇನಾ ಯೋಧರು, ಶಾಂಘೈ ಸಹಕಾರ ಸಂಘದ (ಎಸ್'ಸಿಒ) ವತಿಯಿಂದ ಇದೇ ಮೊದಲ ಬಾರಿಗೆ ಒಟ್ಟಿಗೆ ಸಮರಾಭ್ಯಾಸ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ...
ನವದೆಹಲಿ: ಉಗ್ರರ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಸೇನಾ ಯೋಧರು, ಶಾಂಘೈ ಸಹಕಾರ ಸಂಘದ (ಎಸ್'ಸಿಒ) ವತಿಯಿಂದ ಇದೇ ಮೊದಲ ಬಾರಿಗೆ ಒಟ್ಟಿಗೆ ಸಮರಾಭ್ಯಾಸ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ.
ಎಸ್'ಸಿಒದ ಶಾಂತಿ ಮಿಷನ್-2018 ಅಡಿಯಲ್ಲಿ ರಷ್ಯಾ ರಾಷ್ಟ್ರ ಚೆಬಾರ್ಕುಲ್ ಹಾಗೂ ಚೆಲ್ಯಾಬಿಸ್ಕ್ ಪ್ರದೇಶಗಳಲ್ಲಿ ಈ ಸಮರಾಭ್ಯಾಸ ನಡೆಯಲಿದ್ದು, ಕೇವಲ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳಷ್ಟೇ ಅಲ್ಲದೆ, ಎಸ್'ಸಿಒ ಸದಸ್ಯ ರಾಷ್ಟ್ರಗಳೂ ಕೂಡ ಇದರಲ್ಲಿ ಭಾಗವಹಿಸಲಿವೆ ಎಂದು ತಿಳಿದುಬಂದಿದೆ.
ಎಸ್'ಸಿಒ ಸದಸ್ಯ ರಾಷ್ಟ್ರಗಳ ಈ ಜಂಟಿ ಸಮಾರಾಭ್ಯಾಸ ರಷ್ಯಾದ ಚೆಬಾರ್ಕುಲ್ ಪ್ರದೇಶದಲ್ಲಿ ಆಗಸ್ಟ್ 22ರಿಂದ ಆಗಸ್ಟ್ 29ರವರೆಗೂ ಅಂದರೆ 8ರವರೆಗೂ ನಡೆಯಲಿದೆ.
ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ನಡೆಸುವ ಸಲುವಾಗಿ ಇದರೆ ರಾಷ್ಟ್ರಗಳು ಯೋಧರೊಂದಿಗೆ ಜಂಟಿಯಾಗಿ ಸಮರಾಭ್ಯಾಸ ನಡೆಸುವ ವಿಶೇಷ ಅವಕಾಶವನ್ನು ಎಸ್'ಸಿಒ ಒದಗಿಸಿದೆ. ಇದು ವೃತ್ತಿಪರ ಹೊಂದಾಣಿಕೆಯಾಗಲಿದ್ದು, ಜಂಟಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಕವಾಯತು ಮತ್ತು ನಿಯಮಾವಳಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಇದರ ಜೊತೆಗೆ ಉಗ್ರ ಬೆದರಿಕೆಗಳನ್ನು ನಿಗ್ರಹಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಜಂಟಿ ಸಮಾರಾಭ್ಯಾಸಕ್ಕೆ ರಷ್ಯಾ ರಾಷ್ಟ್ರ 1700 ಸೈನಿಕರನ್ನು ನಿಯೋಜಿಸಿದ್ದರೆ, ಚೀನಾ 700 ಹಾಗೂ ಭಾರತ 200 ಸೈನಿಕರನ್ನು ಕಳುಹಿಸಿದೆ ಎಂದು ವರದಿಗಳು ತಿಳಿಸಿವೆ.