ರಾಷ್ಟ್ರವು ಕೇರಳದೊಂದಿಗೆ ನಿಂತಿದೆ: ಪ್ರಧಾನಿ ಮೋದಿ ಓಣಂ ಶುಭ ಸಂದೇಶ

ವಿನಾಶಕಾರಿ ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಕೇರಳದ ಜನತೆಗೆ ಓಣಂ ಹಬ್ಬ ಹೊಸ ಶಕ್ತಿ ನೀಡುವ ವಿಶ್ವಾಸವಿದೆ. ರಾಷ್ಟ್ರವು ಕೇರಳದೊಂದಿಗೆ ನಿಂತಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ
ಪ್ರಧಾನಿ ನರೇಂದ್ರಮೋದಿ
Updated on

ನವದೆಹಲಿ: ವಿನಾಶಕಾರಿ ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಕೇರಳದ ಜನತೆಗೆ ಓಣಂ ಹಬ್ಬ ಹೊಸ ಶಕ್ತಿ ನೀಡುವ ವಿಶ್ವಾಸವಿದೆ. ರಾಷ್ಟ್ರವು ಕೇರಳದೊಂದಿಗೆ ನಿಂತಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ  ವಿನಾಶಕಾರಿ ಪ್ರವಾಹ ಎದುರಿಸಿದ ಕೇರಳದ   ಜನತೆಗೆ  ಓಣಂ ಹೊಸ ಶಕ್ತಿ  ನೀಡಲಿ ಎಂದು ಟ್ವೀಟರ್ ನಲ್ಲಿ ಪ್ರಧಾನಿ ಶುಭ ಸಂದೇಶ ಕೋರಿದ್ದಾರೆ

ಇಡೀ ರಾಷ್ಟ್ರವು  ಕೇರಳ ರಾಜ್ಯದ ಭುಜದೊಂದಿಗೆ ಭುಜ ಕೊಟ್ಟಿ ನಿಂತಿದೆ ಮತ್ತು ಅದರ ಪ್ರಜೆಗಳ ಸಂತೋಷ ಮತ್ತು ಪ್ರಜ್ಞೆಗಾಗಿ ಪ್ರಾರ್ಥಿಸುತ್ತಿದೆ ಎಂದು ಅವರು ಹೇಳಿದ್ದಾರೆ.

 ಆಗಸ್ಟ್ 8 ರಿಂದ ಸುರಿದ ಮಹಾಮಳೆಯಿಂದಾಗಿ ಕೇರಳದಲ್ಲಿ ಪ್ರವಾಹ ಉಂಟಾಗಿ 231 ಜನರು ಸಾವವನ್ನಪ್ಪಿದ್ದರು. ಶತಮಾನದಲ್ಲಿಯೇ ಅತಿ ಭೀಕರ  ಪ್ರವಾಹಕ್ಕೆ ಕೇರಳ ರಾಜ್ಯ ಸಾಕ್ಷಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com