ಮುಜಾಫರ್ ನಗರ ಗಲಭೆಗೆ 5 ವರ್ಷ; ಪ್ರೇಮಿಗಳಿಗೆ ಅಡ್ಡಿಯಾದ ಧರ್ಮ

ಮಕ್ಕಳಾಗಿದ್ದವರಿಂದಲೇ ಫರ್ಹಾ ಮತ್ತು ರಾಹುಲ್(ಹೆಸರು ಬದಲಿಸಲಾಗಿದೆ) ಪರಿಚಿತಸ್ಥರಾಗಿದ್ದರು...
ಫೋಟೋ ತೆಗೆಯುವಾಗ ತನ್ನ ಸ್ನೇಹಿತೆಯನ್ನು ಬುರ್ಕಾ ಮೂಲಕ ರಕ್ಷಿಸುತ್ತಿರುವ ಮುಸ್ಲಿಂ ಮಹಿಳೆ
ಫೋಟೋ ತೆಗೆಯುವಾಗ ತನ್ನ ಸ್ನೇಹಿತೆಯನ್ನು ಬುರ್ಕಾ ಮೂಲಕ ರಕ್ಷಿಸುತ್ತಿರುವ ಮುಸ್ಲಿಂ ಮಹಿಳೆ
Updated on: 

ಮುಜಾಫರ್ ನಗರ: ಮಕ್ಕಳಾಗಿದ್ದವರಿಂದಲೇ ಫರ್ಹಾ ಮತ್ತು ರಾಹುಲ್(ಹೆಸರು ಬದಲಿಸಲಾಗಿದೆ) ಪರಿಚಿತಸ್ಥರಾಗಿದ್ದರು. ರಾಹುಲ್ ಹಿಂದೂ ರಜಪೂತನಾಗಿದ್ದರೆ ಫರ್ಹಾ ಮುಸ್ಲಿಂ ಗ್ರಾಮದ ಒಂದೇ ಶಾಲೆಗೆ ಹೋದವರು ಮತ್ತು ಒಂದೇ ಕಾಲೇಜಿನಲ್ಲಿ ಇದ್ದಾರೆ.

ನಾವು ಸಹಜೀವನ ನಡೆಸಲು ಬಯಸುತ್ತಿದ್ದೇವೆ ಆದರೆ ನಮ್ಮ ಪೋಷಕರಲ್ಲಿ ಹೇಳಲು ಭಯವಾಗುತ್ತಿದೆ. ಅವರು ನನ್ನನ್ನು ಅಥವಾ ಅವಳನ್ನು ಸಾಯಿಸುತ್ತಾರೆ ಎಂದು ರಾಹುಲ್ ಹೇಳುತ್ತಾನೆ. ದೆಹಲಿಯ ಹೆದ್ದಾರಿ ಸಮೀಪ ಒಟ್ಟಿಗೆ ಸಮಯ ಕಳೆಯುತ್ತಾರೆ, ಕದ್ದು ಮುಚ್ಚಿ ಓಡಾಡುತ್ತಾರೆ.

ನಮ್ಮ ಸಂಬಂಧ ಮದುವೆಯಲ್ಲಿ ಕೊನೆಯಾಗುವುದಿಲ್ಲ ಎಂದು ನಮಗೆ ಗೊತ್ತಿದೆ. ಹೀಗಾಗಿ ನಾವು ಜೊತೆಯಲ್ಲಿರುವಷ್ಟು ದಿನ ಸಂತೋಷವಾಗಿ ಕಳೆಯಲು ಬಯಸುತ್ತಿದ್ದೇವೆ. ನಮಗಿಬ್ಬರಿಗೂ ನಮ್ಮ ಧರ್ಮವನ್ನು ಬಿಟ್ಟುಬಿಡಲು ಮನಸ್ಸಿಲ್ಲ ಎನ್ನುತ್ತಾಳೆ ಫರ್ಹಾ.

ಈ ಜೋಡಿಯ ಸ್ಥಿತಿ 2013ರ ಆಗಸ್ಟ್ -ಸೆಪ್ಟೆಂಬರ್ ನಂತರ ಮುಜಾಫರ್ ನಗರದ ಅಂತರ ಧರ್ಮೀಯರಲ್ಲಿನ ಸಂಬಂಧಗಳ ವಾಸ್ತವ ಸ್ಥಿತಿಗತಿಯನ್ನು ತೋರಿಸುತ್ತದೆ. ಪಶ್ಚಿಮ ಉತ್ತರ ಪ್ರದೇಶದ ಸೊಮ್ನೊಲೆಂಟ್ ಗ್ರಾಮದಲ್ಲಿ 2013ರಲ್ಲಿ ಎರಡು ವಾರಗಳ ಕಾಲ ನಡೆದ ಕೋಮು ಹಿಂಸಾಚಾರದಲ್ಲಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು 50 ಸಾವಿರ ಮಂದಿ ನಿರಾಶ್ರಿತರಾಗಿದ್ದರು.

ಹಿಂಸಾಚಾರ ಮತ್ತು ಗಲಭೆ ನಡೆದ ನಂತರ ಮುಜಾಫರ್ ನಗರದಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಒಂದು ಅಂತರ ಧರ್ಮೀಯ ವಿವಾಹ ಕೂಡ ದಾಖಲಾಗಿಲ್ಲ. ವಿಶೇಷ ವಿವಾಹ ಕಾಯ್ದೆಯಡಿ ಗಂಡು ಅಥವಾ ಹೆಣ್ಣು ತಮ್ಮ ಧರ್ಮವನ್ನು ತೊರೆಯದೆ ಬೇರೆ ಧರ್ಮದವರನ್ನು ಮದುವೆಯಾಗಬಹುದು.

2013ರ ಈ ಗಲಭೆಗಿಂತ ಮುಂಚೆ ಮುಜಾಫರ್ ನಗರದಲ್ಲಿ ಅಧಿಕ ಅಂತರಧರ್ಮೀಯ ವಿವಾಹಗಳು ನೆರವೇರುತ್ತಿದ್ದವು. 2011 ಮತ್ತು 2012ರಲ್ಲಿ ಎರಡು ಮದುವೆಗಳು ದಾಖಲಾಗಿದ್ದವು. ಗಲಭೆ ಸಂಭವಿಸಿದ ನಂತರ ಇಲ್ಲಿ ಹಿಂದೂ ಮತ್ತು ಮುಸ್ಲಿಂ ಮಧ್ಯೆ ತೀವ್ರ ದ್ವೇಷ, ಅಪನಂಬಿಕೆ, ಸಂಶಯ, ಹಗೆತನ ಬೆಳೆದಿದೆ ಎಂದು ಗ್ರಾಮಸ್ಥರು ಮತ್ತು ಅಧಿಕಾರಿಗಳು ಹೇಳುತ್ತಾರೆ. 2013ರ ನಂತರ 5 ವರ್ಷಗಳು ಕಳೆದಿವೆ, ರಾಜ್ಯ ಸರ್ಕಾರ ಕೂಡ ಬದಲಾಗಿದೆ. ಆದರೆ ಗ್ರಾಮಸ್ಥರಲ್ಲಿ ಜನರ ಮನಸ್ಸಿನಲ್ಲಿ ಆದ ಗಾಯ ಮಾತ್ರ ಮಾಸಿಲ್ಲ.

2013ರಲ್ಲಿ ನಡೆದ ಕೋಮುವಾದಿ ಹಿಂಸಾಚಾರದ ನಂತರ ಜೋಡಿಗಳು ಮದುವೆಯಾಗುವುದು ಬಿಡಿ, ಸಂಬಂಧವನ್ನು ಹೊರಗೆ ಹೇಳಿಕೊಳ್ಳಲು ಕೂಡ ಹೆದರುತ್ತಾರೆ. ಕೆಲವರು ತಮಗೆ ರಕ್ಷಣೆ ಬೇಕೆಂದು ಹೈಕೋರ್ಟ್ ಮೊರೆ ಹೋಗುತ್ತಾರೆ ಎನ್ನುತ್ತಾರೆ ಮುಜಾಫರ್ ನಗರದ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ರಾಮ್ ಕಿಶೋರ್.
ರಾಹುಲ್ ಮತ್ತು ಫರ್ಹಾರಂತೆ ಇನ್ನೂ ಹಲವು ಅಂತರ್ ಧರ್ಮೀಯ ಜೋಡಿಗಳು ಪ್ರೀತಿಸುತ್ತಿದ್ದು ಮದುವೆಯಾಗಲು ಭಯಪಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com