ತಿರುವಂನತಪುರ: ಶತಮಾನದ ಹಿಂದೆ ಅಂದರೆ 1924 ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹಕ್ಕೆ ಸ್ಪಂದಿಸಿದ ಮಹಾತ್ಮ ಗಾಂಧೀಜಿ ಸಂತ್ರಸ್ತರ ಪರಿಹಾರಕ್ಕಾಗಿ ರು, 6ಸಾವಿರ ಹಣವನ್ನು ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.
2018ರ ಪ್ರವಾಹ 290 ಮಂದಿಯನ್ನು ಬಲಿ ಪಡೆದು 10 ಲಕ್ಷ ಮಂದಿ ನೆಲೆ ಕಳೆದುಕೊಂಡಿದ್ದಾರೆ, 94 ವರ್ಷಗಳ ಹಿಂದೆಯೂ ಕೇರಳಕ್ಕೆ ಇಂಥದ್ದೇ ಪ್ರವಾಹದಿಂದ ಸಾಕಷ್ಟು ಸಮಸ್ಯೆ ಅನುಭವಿಸಿತ್ತು.
ಯಂಗ್ ಇಂಡಿಯಾ ಮತ್ತು ನವ ಜೀವನ್ ಪತ್ರಿಕೆಗಳಲ್ಲಿ ಲೇಖನ ಪ್ರಕಟಿಸಿ ಪ್ರವಾಹ ಪೀಡಿತ ಮಲಬಾರ್ ಗೆ ದೇಣಿಗೆ ನೀಡುವಂತೆ ಜನರನ್ನು ಪ್ರೇರೇಪಿಸಿದ್ದರು. ದೇಶಾದ್ಯಂತ ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಬಂದಿದ್ದು, ಗಾಂದೀಜಿ ಲೇಖನಕ್ಕೆ ಸ್ಪಂದಿಸಿದ್ದ ಮಹಿಳೆ ಮತ್ತು ಮಕ್ಕಳು ಸೇರಿದಂತೆ ಹಲವರು ಹಣ ಚಿನ್ನಾಭರಣ ನೀಡಿದ್ದರು.
ಕೆಲವರು ಊಟ ತ್ಯಜಿಸಿ ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಿದ್ದರು, ದೇಣಗೆ ನೀಡಲು ಬಾಲಕಿಯೊಬ್ಬರು 3 ಪೈಸೆ ಹಣ ಕದ್ದಿದ್ದನ್ನು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಜುಲೈ ತಿಂಗಳಲ್ಲಿ ಸತತ ಮೂರು ವಾರ ಕೇರಳ ಪ್ರವಾಹದಲ್ಲಿ ಮುಳುಗಿತ್ತು, ಮುನ್ನಾರ್, ತ್ರಿಶೂರ್, ಕೊಯಿಕ್ಕೋಡ್, ಎರ್ನಾಕುಲಂ, ಆಲುವಾ ಮೂವಾಟ್ಟುಪುವು ತಿರುವನಂತಪುರ ಗಳು ಸಂಕಷ್ಟಕ್ಕೆ ಈಡಾಗಿದ್ದವು