ಹನುಮ ದಲಿತ ಎಂಬ ಸಿಎಂ ಯೋಗಿ ಹೇಳಿಕೆ ಬೆನ್ನಲ್ಲೇ, ದೇಗುಲದ ನಿರ್ವಹಣೆಗೆ ದಲಿತರ ಪಟ್ಟು!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಹನುಮಂತನನ್ನು ದಲಿತ ಎಂದು ಕರೆದ ಬೆನ್ನಲ್ಲೇ ದಲಿತ ಸಮುದಾಯದ ಸದಸ್ಯರು ಹನುಮಂತನ ದೇವಾಲಯಗಳ ನಿರ್ವಹಣೆಯನ್ನು ತಮಗೇ ನೀಡುವಂತೆ ಮನವಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಆಗ್ರಾ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಹನುಮಂತನನ್ನು ದಲಿತ ಎಂದು ಕರೆದ ಬೆನ್ನಲ್ಲೇ ದಲಿತ ಸಮುದಾಯದ ಸದಸ್ಯರು ಹನುಮಂತನ ದೇವಾಲಯಗಳ ನಿರ್ವಹಣೆಯನ್ನು ತಮಗೇ ನೀಡುವಂತೆ ಮನವಿ ಮಾಡಿದ್ದಾರೆ.
ಆಗ್ರಾದ ದಲಿತ ಸಮುದಾಯಕ್ಕೆ ಸೇರಿದ 30 ಜನರು ಹನುಮಾನ್​ ಚಾಲೀಸಾ ಪಠಿಸುತ್ತಾ, ದಲಿತ ದೇವ ಹನುಮಾನ್​ ಕಿ ಜೈ ಎಂಬ ಘೋಷಣೆ ಕೂಗುತ್ತಾ ದೆಹಲಿ-ಕಾನ್ಪುರ​ ಹೆದ್ದಾರಿಯ ಲಂಗ್ರೆ ಕಿ ಚೌಕಿಯಲ್ಲಿ ಹನುಮಂತನ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ನಾಯಕ ಅಮಿತ್​ ಸಿಂಗ್ ಅವರು,​ ಹನುಮಂತ ನಮ್ಮ ಸಮುದಾಯಕ್ಕೆ ಸೇರಿದವರು ಎಂಬುದು ನಮಗೆ ಗೊತ್ತೇ ಇರಲಿಲ್ಲ. ಕಳೆದ ವಾರ ನಮ್ಮ ಮುಖ್ಯಮಂತ್ರಿಗಳು ಈ ವಿಷಯವನ್ನು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿರುವ ಎಲ್ಲ ಹನುಮಂತನ ದೇವಾಲಯಗಳ ಆಡಳಿತವನ್ನು ದಲಿತ ಸಮುದಾಯಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಬುಧವಾರ ಅಳ್ವಾರ್​ ಜಿಲ್ಲೆಯ ಮಾಳಖೇಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ, ಹನುಮಂತ ಒಬ್ಬ ಅರಣ್ಯ ನಿವಾಸಿಯಾಗಿದ್ದು, ಎಲ್ಲಾ ಭಾರತೀಯ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ ಎಂದು ಹೇಳಿದ್ದರು. 
ಈ ಹೇಳಿಕೆ ಬಾರಿ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ ಸಂಘಟನೆಯೊಂದು ಸಿಎಂ ಯೋಗಿ ಆದಿತ್ಯಾನಾಥ್ ವಿರುದ್ಧ ಲೀಗಲ್ ನೋಟಿಸ್ ಕೂಡ ನೀಡಿದ್ದು, ಆ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ಅಂತೆಯೇ ಯೋಗಿ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com