ಅವಕಾಶವಿರುವವರು ಸಬ್ಸಿಡಿ ಮೊತ್ತವನ್ನು ಬಿಟ್ಟುಕೊಟ್ಟು ರೈಲ್ವೆ ಇಲಾಖೆಯ ಮೇಲಿರುವ ಹೊರೆಯನ್ನು ಕಡಿಮೆ ಮಾಡಲು ಸಹಕರಿಸಬೇಕಾಗಿ ರೈಲ್ವೆ ಇಲಾಖೆ ಮನವಿ ಮಾಡಿತ್ತು. ಇದಕ್ಕಾಗಿ ಕಳೆದ ವರ್ಷ ಜುಲೈ 22 ರಂದು ಗಿವ್ ಅಪ್ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆನ್ ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸುವವರಿಗಾಗಿ ಶೇ.100 ರಷ್ಟು ದರ ವಿನಾಯಿತಿ, ಶೇ.50 ರಷ್ಟು ದರ ವಿನಾಯಿತಿ, ವಿನಾಯಿತಿಯೇ ಇಲ್ಲ ಎಂಬ ಮೂರು ಆಯ್ಕೆ ಗಳನ್ನು ನೀಡಲಾಗಿತ್ತು. ಈ ಸಂಬಂಧ ಆರ್ ಟಿಐ ನಲ್ಲಿ ಪಡೆಯಲಾದ ಮಾಹಿತಿಯ ಪ್ರಕಾರ ಈ ವರೆಗೆ ಒಟ್ಟಾರೆ 32.12 ಲಕ್ಷ ಹಿರಿಯ ನಾಗರಿಕರು ದರ ವಿನಾಯಿತಿಯನ್ನು ನೀಡಿದ್ದು, ರೈಲ್ವೆ ಇಲಾಖೆ 55.12 ಕೋಟಿ ರೂಪಾಯಿ ಉಳಿತಾಯ ಮಾಡಲು ಸಹಕರಿಸಿದ್ದಾರೆ.