ಇಂದು ತೀರ್ಪು ಪ್ರಕಟಿಸಿರುವ ನ್ಯಾಯಪೀಠ ತನಿಖೆಗೆ ಅಸಮ್ಮತಿ ಸೂಚಿಸಿದ್ದು, ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದೆ. ವಿಮಾನ ಖರೀದಿ ಪ್ರಕ್ರಿಯೆಯು ನಮಗೆ ತೃಪ್ತಿಯನ್ನು ತಂದಿದೆ. ಒಪ್ಪಂದ ಕುರಿತು ಯಾವುದೇ ರೀತಿಯ ಸಂಶಯಗಳೂ ಮೂಡುತ್ತಿಲ್ಲ. ಯಾವುದೇ ರೀತಿಯ ಸಿದ್ಥತೆಗಳಿಲ್ಲದೆ ಒಂದು ದೇಶ ಇರಲು ಸಾಧ್ಯವಿಲ್ಲ. 126 ಯುದ್ಧ ವಿಮಾನಗಳನ್ನೇ ಖರೀದಿ ಮಾಡುವಂತೆ ಸರ್ಕಾರಕ್ಕೆ ನಾವು ಒತ್ತಾಯ ಮಾಡಲು ಸಾಧ್ಯವಿಲ್ಲ. ಪ್ರತೀಯೊಂದು ಭಾಗದಲ್ಲೂ ಅಂಶಗಳಲ್ಲೂ ನ್ಯಾಯಾಲಯ ಪರಿಶೀಲನೆ ನಡೆಸುವುದು ಸರಿಯಲ್ಲ. ಬೆಲೆ ಹೋಲಿಕೆ ಮಾಡುವುದು ನ್ಯಾಯಾಲಯದ ಕೆಲಸವೂ ಅಲ್ಲ ಎಂದು ಹೇಳಿದೆ.