ಅಧಿಕಾರದಿಂದ ನಿರ್ಗಮಿಸುವಾಗಿನ ತಮ್ಮ ಸರಳತೆಗೆ ಈ ವರೆಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ತಮ್ಮ ಮುತ್ಸದ್ದಿತನದ ನಡೆಗೆ ಶಿವರಾಜ್ ಸಿಂಗ್ ಚೌಹಾಣ್ ಎಲ್ಲರ ಮನಸ್ಸುಗಳನ್ನು ಗೆದ್ದಿದ್ದಾರೆ. ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭದಲ್ಲಿ ವಿಪಕ್ಷ ನಾಯಕರು ಉಪಸ್ಥಿತರಿದ್ದರೆ, ವೇದಿಕೆ ಹಂಚಿಕೊಳ್ಳುವುದು ತೀರಾ ವಿರಳ. ಆದರೆ ಈ ಸಂಪ್ರದಾಯವನ್ನು ಬದಿಗೊತ್ತಿರುವ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ನೂತನ ಸಿಎಂ ಕಮಲ್ ನಾಥ್ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೂ ಅಲ್ಲದೇ ವೇದಿಕೆ ಹಂಚಿಕೊಂಡು ಸಿಎಂ ಕಮಲ್ ನಾಥ್ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ಕೈ ಹಿಡಿದು ಸಾರ್ವಜನಿಕರತ್ತ ಕೈ ಬೀಸಿ ಮುತ್ಸದ್ದಿ ತನ ಮೆರೆದಿದ್ದಾರೆ.