ಕಳೆದ ಜೂನ್ ನಲ್ಲಿ ಬಿಜೆಪಿ, ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ನಂತರ ರಾಜ್ಯಪಾಲರ ಆಡಳಿತ ಜಾರಿಗೊಳಿಸಲಾಗಿತ್ತು. ಆರು ತಿಂಗಳ ರಾಜ್ಯಪಾಲರ ಆಡಳಿತ ಅಂತ್ಯಗೊಂಡ ನಂತರ ಪಿಡಿಪಿ, ಕಾಂಗ್ರೆಸ್ ಹಾಗೂ ಎನ್ ಸಿ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದವು. ಆದರೆ ಇದಕ್ಕೆ ಅವಕಾಶ ನೀಡದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು, ನವೆಂಬರ್ 21ರಂದು ಕಣಿವೆ ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸಿದ್ದರು.