ಮೋದಿ ಸರ್ಕಾರವು 'ಏಕವ್ಯಕ್ತಿ ಪ್ರದರ್ಶನ'ದಂತಿದೆ: ಪ್ರಧಾನಿ, ಅಮಿತ್ ಶಾ ವಿರುದ್ಧ ಶತ್ರುಘ್ನ ಸಿನ್ಹಾ ವಾಗ್ದಾಳಿ

ಕೇಂದ್ರದ ಎನ್ ಡಿಎ ಸರ್ಕಾರ ಒಂದು ಏಕವ್ಯಕ್ತಿ ಪ್ರದರ್ಶನ ಹಾಗೂ ಇಬ್ಬರೇ ನಡೆಸುವ ಸೇನೆಯಂತಿದೆ ಎಂದು ಭಾರತೀಯ ಜನತಾ ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ
ತಿರುವನಂತಪುರಂ: ಕೇಂದ್ರದ ಎನ್ ಡಿಎ ಸರ್ಕಾರ ಒಂದು ಏಕವ್ಯಕ್ತಿ ಪ್ರದರ್ಶನ ಹಾಗೂ ಇಬ್ಬರೇ ನಡೆಸುವ ಸೇನೆಯಂತಿದೆ ಎಂದು ಭಾರತೀಯ ಜನತಾ ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ನರೇಂದ್ರ ಮೋದಿ ಮತ್ತು ಪಕ್ಷದ ಮುಖ್ಯಸ್ಥ ಅಮಿತ್ ಶಾಅವರ ವಿರುದ್ಧ ಧೋರಣೆಗಳನ್ನು ಹೊರಹಾಕಿರುವ ಸಿನ್ಹಾ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ ಡಿಎ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು., "ಪಕ್ಷವು ವ್ಯಕ್ತಿಗಿಂತಲೂ ದೊಡ್ಡದು ಆದರೆ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರವು ಎಂದಿಗೂ  ಪಕ್ಷಕ್ಕಿಂತ ದೊಡ್ಡದಾಗಿರುತ್ತದೆ" ಅವರು ಹೇಳಿದ್ದಾರೆ.
"ನಾನು ಎಂದಿಗೂ ರಾಷ್ಟ್ರದ ಪರವಾಗಿದ್ದೇನೆ, ನಾನೇನು ಮಾಡಿದ್ದೇನೋ ಅದು ರಾಷ್ಟ್ರದ ಹಿತಾಸಕ್ತಿಗಾಗಿ ಮಾಡಿದ್ದೇನೆ, ಇದರಲ್ಲಿ ನನ್ನ ಸ್ವ ಹಿತಾಸಕ್ತಿ ಏನೇನೂ ಇಲ್ಲ." ಅವರು ಹೇಳಿದ್ದಾರೆ. 
ತಿರುವನಂತಪುರಂ ಸಂಸದ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಬರೆದಿರುವ "ದಿ ಪೆರಡಾಕ್ಸಿಯಲ್ ಪ್ರೈಮ್ ಮಿನಿಸ್ಟರ್ ನರೇಂದ್ರ ಮೋದಿ ಆಂಡ್ ಹಿಸ್ ಇಂಡಿಯಾ" ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಹಲವು ನೀತಿಗಳನ್ನು ಟೀಕಿಸುತ್ತಾ ಬಂದಿರುವ ಚಿತ್ರನಟ, ರಾಜಕಾರಣಿ ಸಿನ್ಹಾ ದೇಶದ ಜನರಿಗೆ ಉದ್ಯೋಗಗ ಹಾಗೂ  ಉತ್ತಮ ಸೌಲಭ್ಯಗಳು ದೊರಕಬೇಕೆ ಹೊರತು ಭರವಸೆ ಮತ್ತು ಜಮ್ಲಾಗಳಿಂದ ಏನೂ ಸಾಧಿಸಲಾಗುವುದಿಲ್ಲ ಎಂದಿದ್ದಾರೆ. ನಾನು ಕೇವಲ 15 ಲಕ್ಷ ರೂಪಾಯಿಗಳ ಬಗ್ಗೆ ಮಾತಾಡುತ್ತಿಲ್ಲ ನಾನು (ಮೋದಿ) ಅವರ ವಿರುದ್ಧ ಇಲ್ಲ ಆದರೆ ನಾನು ಏಕವ್ಯಕ್ತಿ ಪ್ರದರ್ಶನ ಹಾಗೂ ಇಬ್ಬರೇ ನಡೆಸುವ ಸೈನ್ಯದ ವಿರುದ್ಧ ಇದ್ದೇನೆ.ಮೋದಿ ಹಾಗೂ ಶಾ ದೇಶವನ್ನು ನಡೆಸುವ ರೀತಿ ಇದಾಗಿದೆ.
"ಓರ್ವ ನಟನಾಗಿಜಿಎಸ್ಟಿ ಮತ್ತು ಇತರ ವಿಷಯಗಳ ಬಗ್ಗೆ ನಾನು ಮಾತನಾಡಿದರೆ ತಪ್ಪೆಂದಾದಲ್ಲಿ "ಒಬ್ಬ ವಕೀಲರು ಯಾವುದೇ ಅನುಭವ  ಜ್ಞಾನವಿಲ್ಲದೆ ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತನಾಡಿದರೆ,  ಟಿವಿ ಆಂಕರ್ ಒಬ್ಬರು ಮಾನವ ಸಂಪನ್ಮೂಲ ಸಚಿವರಾದರೆ ಚಹಾ-ಮಾರಾಟಗಾರ ದೇಶದ ಪ್ರಧಾನಿ ಆಗುವುದು ತಪ್ಪಲ್ಲವೆ? ನಾನು ಮಾಡಿದರೆ ಮಾತ್ರ ಅದು ಹೇಗೆ ತಪ್ಪೆಂದು ಹೇಳಲಾಗುತ್ತದೆ? ರಾಷ್ಟ್ರೀಯ ಹಿತಾಸಕ್ತಿ ಹಿನ್ನೆಲೆಯಲ್ಲಿ ಅಪನಗದೀಕರಣ ಬಗ್ಗೆ ಮಾತನಾಡಲು ಆನು ಚಲನಚಿತ್ರ ನಟನಾಗಿಯೂ ಸಾಕಷ್ಟು ಅನುಭವ ಪಡೆದಿದ್ದೇನೆ" ಸಂಸದ ಸಿನ್ಹಾ ಹೇಳಿದ್ದಾರೆ.
ತರೂರ್ ಅವರ ಪುಸ್ತಕವನ್ನು ಓದಿದ ಬಳಿಕ ಪ್ರಧಾನಿ ಮೋದಿ ಕುರಿತಂತೆ ಜನರ ಭಾವನೆ ಬದಲಾಗಬಹುದು, ಅವರ ವಿರೋಧಾಭಾಸ ಹಾಗೂ  ಅಸಂಬದ್ಧ ನಿರ್ಣಯಗಳ ಬಗ್ಗೆ ಜನರಿಗೆ ಅರಿವಾಗಬಹುದುಎಂದು ಸಿನ್ಹಾ ಹೇಳಿದರು.
ಏತನ್ಮಧ್ಯೆ, ತರೂರ್ ಅವರು ಸಿನ್ಹಾ ಅವರನ್ನು ಕಾಂಗ್ರೆಸ್ಗೆ ಸೇರಲು ಆಹ್ವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com