ಮಧ್ಯಪ್ರದೇಶ: ನವಜಾತ ಶಿಶುವಿನ ಬೆರಳುಗಳನ್ನು ಕತ್ತರಿಸಿದ ತಾಯಿ, ಮಗು ಸಾವು!

Published On :
ಖಾಂದ್ವಾ: ಹೆಚ್ಚು ಬೆರಳುಗಳೊಂದಿಗೆ ಹುಟ್ಟಿದ್ದ ನವಜಾತ ಶಿಶುವಿನ ಬೆರಳುಗಳನ್ನು ತಾಯಿಯೇ ಕತ್ತರಿಸಿದ್ದು, ಮಗು ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಬುಡಕಟ್ಟು ಪ್ರದೇಶವಾದ ಖಂದ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುಂದರ್ ದೇವ್ ಗ್ರಾಮದಲ್ಲಿ ತಾರಾಬಾಯಿ ಎಂಬ ಮಹಿಳೆ ಡಿ.22 ರಂದು ಜನ್ಮ ನೀಡಿದ್ದ ಹೆಣ್ಣುಮಗುವಿಗೆ ಎರಡೂ ಕೈ ಹಾಗೂ ಕಾಲುಗಳಲ್ಲಿ 6 ಬೆರಳುಗಳಿದ್ದವು. ಹೆಣ್ಣುಮಗುವಾದ್ದರಿಂದ ದೊಡ್ಡವಳಾದ ಮೇಲೆ ಇದು ಅವಲಕ್ಷಣವಾಗಿ ಕಂಡು ಮದುವೆಯಾಗುವ ಸಾಧ್ಯತೆಗಳು ಕಡಿಮೆಯಾಗಬಹುದೆಂಬ ಭಯದಿಂದ ಸ್ವತಃ ತಾಯಿಯೇ ಮಗುವಿನ ಕೈ ಕಾಲಿನ ಹೆಚ್ಚುವರಿ ಬೆರಳುಗಳನ್ನು ಕತ್ತರಿಸಿದ್ದಾರೆ. ಆದರೆ ಇದರಿಂದಾಗಿ ಮಗು ಸಾವನ್ನಪ್ಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


