ಡಿಸೆಂಬರ್ 19ರಂದು ವಿದೇಶಿ ಮಹಿಳೆ ತನ್ನ ಪಾಟ್ನರ್ ಜತೆ ಚಂಡೀಗಢಕ್ಕೆ ಬಂದಿದ್ದರು. ಬಳಿಕ ಚಂಡೀಗಢದ ಐಟಿ ಪಾರ್ಕ್ ನ ಸ್ಟಾರ್ ಹೊಟೇಲ್ ನಲ್ಲಿ ತಂಗಿದ್ದು ಅಲ್ಲಿನ ಸ್ಪಾದಲ್ಲಿ ಮಸಾಜ್ ಗೆಂದು ಹೋಗಿದ್ದಾಗ ಆರೋಪಿ ಅಸಭ್ಯವಾಗಿ ಮುಟ್ಟಿ, ನನ್ನ ಜೊತೆ ಕೆಟ್ಟದಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.