10 ತಿಂಗಳಲ್ಲಿ ಅತಿಥಿಗಳ ಸತ್ಕಾರಕ್ಕೆ ರೂ.69 ಲಕ್ಷ ಖರ್ಚು ಮಾಡಿದ ಉತ್ತರಾಖಂಡ್ ಸಿಎಂ

ಅತಿಥಿ ದೇವೋ ಭವ ಎಂಬ ಮಾತಿನಂತೆ ಉತ್ತರಾಖಂಡ್ ರಾಜ್ಯ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ತಮ್ಮ ಮನೆಗೆ ಬಂದವರಿಗೆ ಟೀ, ಕಾಫಿ, ಬಿಸ್ಕತ್, ನೀರು ನೀಡಲು ಕೇವಲ 10 ತಿಂಗಳಲ್ಲಿ ರೂ.69 ಲಕ್ಷ ವೆಚ್ಚ ಮಾಡಿರುವ ಕುತೂಹಲಕಾರಿ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ...
ಉತ್ತರಾಖಂಡ್ ರಾಜ್ಯ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್
ಉತ್ತರಾಖಂಡ್ ರಾಜ್ಯ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್
Updated on
ನವದೆಹಲಿ: 'ಅತಿಥಿ ದೇವೋ ಭವ' ಎಂಬ ಮಾತಿನಂತೆ ಉತ್ತರಾಖಂಡ್ ರಾಜ್ಯ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ತಮ್ಮ ಮನೆಗೆ ಬಂದವರಿಗೆ ಟೀ, ಕಾಫಿ, ಬಿಸ್ಕತ್, ನೀರು ನೀಡಲು ಕೇವಲ 10 ತಿಂಗಳಲ್ಲಿ ರೂ.69 ಲಕ್ಷ ವೆಚ್ಚ ಮಾಡಿರುವ ಕುತೂಹಲಕಾರಿ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ. 
ರಾಜ್ಯ ಮುಖ್ಯಮಂತ್ರಿಗಳು ತಮ್ಮ ಕಚೇರಿಗೆ ಬರುವ ಅತಿಥಿಗಳ ಸತ್ಕಾರಕ್ಕಾಗಿ ಎಷ್ಟು ಖರ್ಚು ಮಾಡಿದ್ದಾರೆಂಬ ಮಾಹಿತಿ ನೀಡುವಂತೆ ಆರ್'ಟಿಐ ಕಾರ್ಯಕರ್ತ ಹೇಮಂತ್ ಸಿಂಗ್ ಅವರು, ಸರ್ಕಾರದ ಬಳಿ ಮಾಹಿತಿ ಕೇಳಿದ್ದರು. 
ಈ ಕುರಿತ ಮಾಹಿತಿ ನೀಡಿರುವ ಆರ್'ಟಿಐ ಅಧಿಕಾರಿಗಳು, ಕಳೆದ ವರ್ಷದ ಮುಖ್ಯಮತ್ರಿ ತ್ರಿವೇಂದ್ರ ಸಿಂಗ್ ಅವರು ಅತಿತಿಗಳ ಸತ್ಕಾರಕ್ಕಾಗಿ ರೂ. 68,59,865 ಖರ್ಚು ಮಾಡಿದ್ದಾರೆಂದು ಮಾಹಿತಿ ನೀಡಿದ್ದಾರೆ. 
ರಾವತ್ ಅವರು ಬಿಜೆಪಿ ನಾಯಕರಾಗಿದ್ದು, ಕಳೆದ ವರ್ಷ ಮಾರ್ಚ್ 18 ರಂದು ಅಧಿಕಾರಕ್ಕೆ ಬಂದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com