ಮನೆಗಿಂತ 50 ಮೀಟರ್ ದೂರದಲ್ಲಿ ರೈಲ್ವೆ ಹಳಿ ಇತ್ತು. ಸಹೋದ್ಯೋಗಿಗಳ ಕರೆಗೆ ಉತ್ತರಿಸುವ ಸಲುವಾಗಿ ನರೇಶ್ ರೈಲ್ವೆ ಹಳಿ ಸಮೀಪ ಬಂದಿದ್ದಾರೆ. ಆಗ ಒಂದು ಮೊಬೈಲ್ ನಲ್ಲಿ ಮಾತನಾಡುತ್ತಾ, ಇನ್ನೊಂದು ಮೊಬೈಲ್ ನಲ್ಲಿ ಸಂದೇಶವನ್ನು ಕಳಿಸುತ್ತಿದ್ದ ನರೇಶ್ ಗೆ ಎದುರಿನಿಂದ ರೈಲು ಬರುತ್ತಿದ್ದದ್ದೂ ಗಮನಕ್ಕೆ ಬರಲಿಲ್ಲ. ಹೀಗಾಗಿ ನರೇಶ್ ಗೆ ರಾಜ್ಯ ರಾಣಿ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದುಕೊಂಡು ಹೋಗಿದೆ ಎಂದು ಅವರ ಸಂಬಂಧಿಕರು ಹೇಳಿದ್ದಾರೆ.