

ಅಮೃತಸರ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಇಂದು ಪಂಜಾಬಿನಲ್ಲಿರುವ ಅಮೃತಸರದ ಪ್ರಸಿದ್ಧ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ್ದರು.
ಗೋಲ್ಡನ್ ಟೆಂಪಲ್ ಸುಂದರ , ಅರ್ಥಪೂರ್ಣಿತ ಸ್ಥಳವಾಗಿದ್ದು, ತುಂಬಾ ಗೌರವಾಧರಿಂದ ತಮ್ಮನ್ನು ಬರಮಾಡಿಕೊಳ್ಳಲಾಯಿತು ಎಂದು ವೀಕ್ಷಕರ ಪುಸ್ತಕದಲ್ಲಿ ಅವರು ಹಸ್ತಾಕ್ಷರ ಹಾಕಿದ್ದಾರೆ.
ಗೋಲ್ಡನ್ ಟೆಂಪಲ್ ಭೇಟಿ ನಂತರ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡಿದ ಟ್ರುಡ್ಯೂ, ವ್ಯವಹಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಜಸ್ಟಿನ್ ಟ್ರುಡ್ಯೂ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಸುಖ್ ಬೀರ್ ಸಿಂಗ್ ಬದಾಲ್, ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬದಾಲ್, ಶಿರೋಮಣಿ ಗುರುದ್ವಾರ್ ಪರಬಂಧಕ್ ಕಮಿಟಿ ಅಧ್ಯಕ್ಷ ಗೋಬಿಂದ್ ಸಿಂಗ್ ಲಾಂಗೊವಾಲ್ ಮತ್ತಿತರರು ಆತ್ಮೀಯವಾಗಿ ಬರಮಾಡಿಕೊಂಡರು.
ಸಿಖ್ ಸಮುದಾಯದಿಂದ ಟ್ರುಡ್ಯೂ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.