ಭಾರತ ಶಾಂತಿಯುತವಾಗಿರುವುದು ಪಾಕಿಸ್ತಾನಕ್ಕೆ ಇಷ್ಟವಿಲ್ಲ. ಹೀಗಾಗಿಯೇ ಗಡಿಯಲ್ಲಿ ಪದೇ ಪದೇ ಅ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುತ್ತದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಗುರುವಾರ ಹೇಳಿದೆ...
ಶ್ರೀನಗರ: ಭಾರತ ಶಾಂತಿಯುತವಾಗಿರುವುದು ಪಾಕಿಸ್ತಾನಕ್ಕೆ ಇಷ್ಟವಿಲ್ಲ. ಹೀಗಾಗಿಯೇ ಗಡಿಯಲ್ಲಿ ಪದೇ ಪದೇ ಅ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುತ್ತದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಗುರುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಎಸ್ಎಫ್ ಇನ್ಸ್ ಪೆಕ್ಟರ್ ಜನರಲ್ ಸೋನಾಲಿ ಮಿಶ್ರಾ ಅವರು, ಭಾರತದಲ್ಲಿ ಶಾಂತಿಯುತ ವಾತಾವರಣವಿರುವುದು ಪಾಕಿಸ್ತಾನಕ್ಕೆ ಇಷ್ಟವಿಲ್ಲ. ಹೀಗಾಗಿಯೇ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಡಿಗಳಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ, ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಪಾಕಿಸ್ತಾನದ ದಾಳಿಗೆ ಗಡಿ ಭದ್ರತಾ ಪಡೆಗಳು ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.