ದೆಹಲಿ: ಚುಡಾಯಿಸಿದ ಕಾಮುಕರನ್ನು ಪೊಲೀಸ್ ಠಾಣೆಗೆ ಎಳೆದುತಂದ ದಿಟ್ಟ ಮಹಿಳೆ!

ತನ್ನನ್ನು ಚುಡಾಯಿಸಿದ ಇಬ್ಬರು ಕಾಮುಕರನ್ನು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಎಳೆದು ಕರೆತಂದು ದೂರು ದಾಖಲಿಸಿರುವ ಘಟನೆ ದೆಹಲಿಯ ಘಫರ್ ಮಾರುಕಟ್ಟೆ ...
ಕಾಮುಕನನ್ನು ಎಳೆದು ತರುತ್ತಿರುವ ಮಹಿಳೆ
ಕಾಮುಕನನ್ನು ಎಳೆದು ತರುತ್ತಿರುವ ಮಹಿಳೆ
ದೆಹಲಿ: ತನ್ನನ್ನು ಚುಡಾಯಿಸಿದ ಇಬ್ಬರು ಕಾಮುಕರನ್ನು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಎಳೆದು ಕರೆತಂದು ದೂರು ದಾಖಲಿಸಿರುವ ಘಟನೆ ದೆಹಲಿಯ ಘಫರ್ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ. 
ಫೆಬ್ರವರಿ 25ರಂದು ಮಹಿಳೆ ಆಟೋ ರಿಕ್ಷಾದಲ್ಲಿ  ಘಫರ್ ಮಾರ್ಕೆಟ್ ಪ್ರದೇಶದಲ್ಲಿ ಸಂಚರಿಸುತ್ತಿದ್ದರು, ಈ ವೇಳೆ ಇಬ್ಬರು ಆರೋಪಿಗಳು ಆಕೆಗೆ ಅಶ್ಲೀಲವಾಗಿ  ಮಾತನಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆ, ಇಬ್ಬರಲ್ಲಿ ಒಬ್ಬ ಆರೋಪಿಯನ್ನು  ಹತ್ತಿರದ ಪೊಲೀಸ್ ಠಾಣೆಗೆ ಎಳೆದು ತಂದಿದ್ದಾಳೆ, ಮತ್ತು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.
ಆರೋಪಿಗಳನ್ನು ಅಭಿಷೇಕ್ ಮತ್ತು ಮನೀಶ್ ಎಂದು ಗುರುತಿಸಲಾಗಿದೆ, ಇಬ್ಬರು ಚಾರ್ಕಿ ದದ್ರಿ ಪ್ರದೇಶದ ನಿವಾಸಿಗಳಾಗಿದ್ದಾರೆ, ಇಬ್ಬರ ವಿರುದ್ಧ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com