'ಪ್ರಧಾನಿ ಮೋದಿ ಅವರು ದಲಿತರ ಮೇಲೆ ನಕಲಿ ಪ್ರೀತಿ ತೋರಿಸುತ್ತಿದ್ದಾರೆ. 21ನೇ ಶತಮಾನದಲ್ಲಿ ವಿಶ್ವ ಶ್ರೇಷ್ಠ ನಟ ಭಾರತದಲ್ಲಿ ಉದಯಿಸುತ್ತಾರೆಂದು ನಾಸ್ಟ್ರಾಡಮಸ್ ಭವಿಷ್ಯ ಈಗ ನಿಜವಾಗಿದೆ' ಎಂದು ಮೇವಾನಿ ವ್ಯಂಗ್ಯವಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ದಲಿತ ಸಮುದಾಯದ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೇವಾನಿ ಈ ಟ್ವೀಟ್ ಮಾಡಿದ್ದು, ಮುಂಬೈನಲ್ಲಿ ಇಂದು ಆಯೋಜನೆಗೊಂಡಿದ್ದ ಮೇವಾನಿ ಕಾರ್ಯಕ್ರಮ ಭದ್ರತಾ ಕಾರಣದಿಂದಾಗಿ ರದ್ದಾಗಿತ್ತು.