ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಸುಷ್ಮಾ ಸ್ವರಾಜ್ ಅವರು, ಕೀನ್ಯಾದಲ್ಲಿ ಮಾನವ ಕಳ್ಳಸಾಗಣೆ ರೂಪದಲ್ಲಿ ಬಂಧಿಗಳಾಗಿದ್ದ ಮೂವರು ಭಾರತೀಯ ಯುವತಿಯರು ಹಾಗೂ ನೇಪಾಳದ 7 ಮಂದಿ ಯುವತಿಯರನ್ನು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಕೀನ್ಯಾದಲ್ಲಿ ಮಾನವ ಕಳ್ಳಸಾಗಣೆ ವ್ಯವಸ್ಥಿತ ಅಪರಾಧವಾಗಿದ್ದು, ಭಾರತೀಯ ಅಧಿಕಾರಿಗಳು ತೀವ್ರ ಶ್ರಮಪಟ್ಟು ಆ ಮಾನವ ಕಳ್ಳಸಾಗಣೆಯನ್ನು ಭೇದಿಸಿದ್ದಾರೆ. ಅಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.