ಭಾರತ ಪರಿವರ್ತನೆಗೊಳ್ಳುತ್ತಿದೆ, ಸುಧಾರಣೆಯಿಂದ ಪರಿವರ್ತನೆ ನಮ್ಮ ತತ್ವ: ಪ್ರಧಾನಿ ಮೋದಿ

ಭಾರತ ಪರಿವರ್ತನೆಗೊಳ್ಳುತ್ತಿದ್ದು, ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ಪ್ರಖ್ಯಾತ ರೇಟಿಂಗ್ ಸಂಸ್ಥೆಯಾಗಿರುವ ಮೂಡಿ ಭಾರತವನ್ನು ಧನಾತ್ಮಕವಾಗಿ ನೋಡುತ್ತಿದೆ ಎಂದು...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಭಾರತ ಪರಿವರ್ತನೆಗೊಳ್ಳುತ್ತಿದ್ದು, ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ಪ್ರಖ್ಯಾತ ರೇಟಿಂಗ್ ಸಂಸ್ಥೆಯಾಗಿರುವ ಮೂಡಿ ಭಾರತವನ್ನು ಧನಾತ್ಮಕವಾಗಿ ನೋಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.  
ರಾಜಧಾನಿ ದೆಹಲಿಯಲ್ಲಿ ನಡೆದ ಅನಿವಾಸಿ ಭಾರತೀಯ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಕಳೆದ 3-4 ವರ್ಷಗಳಿಂದ ನೀವು ಗಮಿಸುತ್ತಿರಬಹುದು. ಭಾರತ ವಿಶ್ವದ ಗಮನವನ್ನು ಸೆಳೆಯುತ್ತಿದೆ. ಭಾರತ ಪರಿವರ್ತನೆಗೊಳ್ಳುತ್ತಿದೆ. ಭಾರತ ಮುನ್ನಡೆಯುತ್ತಿದೆ. ಇಂದು ವಿಶ್ವ ಬ್ಯಾಂಕ್, ಐಎಂಎಫ್ ಹಾಗೂ ಮೂಡಿ ಭಾರತವನ್ನು ಧನಾತ್ಮಕವಾಗಿ ನೋಡುತ್ತಿದೆ ಎಂದು ಹೇಳಿದ್ದಾರೆ. 
ಸುಧಾರಣೆಯಿಂದ ಪರಿವರ್ತನೆ ಸರ್ಕಾರದ ತತ್ವವಾಗಿದೆ. ದೂರದೃಷ್ಟಿಯುಳ್ಳ ಸುಧಾರಣೆಗಳನ್ನು ನಾವು ಪರಿಚಯಿಸುತ್ತಿದ್ದೇವೆ. ಸುಧಾರಣೆಯಿಂದ ಪರಿವರ್ತನೆ ನಮ್ಮ ತತ್ವವಾಗಿದೆ. 21ನೇ ಶತಮಾನದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಹಾಗೂ ಸಾರಿಗೆಗೆ ಸರ್ಕಾರ ಬಂಡವಾಳವನ್ನು ಹೆಚ್ಚಿಸಿದೆ. ನಿರ್ಮಾಣ, ವಾಯುಸಾರಿಗೆ, ಗಣಿಗಾರಿಕೆ, ಗಣಕ ತಂತ್ರಾಂಶ, ಯಂತ್ರಾಂಶ, ವಿದ್ಯುತ್ ಉಪಕರಣಗಳು ಹಾಗೂ ಇತರೆ ವಲಯಗಳಲ್ಲಿ ಸರ್ಕಾರ ಹೆಚ್ಚಿನ ಬಂಡವಾಳವನ್ನು ಹೂಡುತ್ತಿದೆ ಎಂದು ತಿಳಿಸಿದ್ದಾರೆ. 
ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜ್ಯಸಭೆ ಉಪಾಧ್ಯಕ್ಷ ಪಿ.ಜೆ. ಕುರಿಯನ್, ಲೋಲಕಭಾ ಉಪಾಧ್ಯಕ್ಷ ತಂಬಿದುರೈ, ಕೇಂದ್ರ ಸಚಿವರಾದ ವಿ.ಕೆ. ಸಿಂಗ್, ಎಂ.ಜೆ. ಅಕ್ಬರ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com