ಸಾಂಗ್ಲಿಯಲ್ಲಿ ಭೀಕರ ಅಪಘಾತ: ಟ್ರಾಕ್ಟರ್, ಎಸ್ ಯುವಿ ಮುಖಾಮುಖಿ ಢಿಕ್ಕಿ, 6 ಕುಸ್ತಿಪಟುಗಳ ಸಾವು

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 6 ಮಂದಿ ಕ್ರೀಡಾಪಟುಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತಕ್ಕೀಡಾದ ಎಸ್ ಯುವಿ ಮತ್ತು ಟ್ರಾಕ್ಟರ್
ಅಪಘಾತಕ್ಕೀಡಾದ ಎಸ್ ಯುವಿ ಮತ್ತು ಟ್ರಾಕ್ಟರ್
ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 6 ಮಂದಿ ಕ್ರೀಡಾಪಟುಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಾಂಗ್ಲಿ ಜಿಲ್ಲೆಯ ಕಡೇಗಾಂವ್-ಸಾಂಗ್ಲಿ ಹೆದ್ದಾರಿಯಲ್ಲಿ ಇಂದು ಮುಂಜಾನೆ ಟ್ರಾಕ್ಟರ್, ಎಸ್ ಯುವಿ ಕಾರು ಮುಖಾಮುಖಿ ಢಿಕ್ಕಿಯಾಗಿದ್ದು, ಘಟನೆಯಲ್ಲಿ 6 ಮಂದಿ ಕುಸ್ತಿಪಟುಗಳು ಸಾವನ್ನಪ್ಪಿದ್ದಾರೆ ಎಂದು  ತಿಳಿದುಬಂದಿದೆ. ಪುಣೆಯ ಔಂದ್ ಗ್ರಾಮದಲ್ಲಿ ನಡೆದ ಕುಸ್ತಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳು ಸಾಂಗ್ಲಿಯ ಕುಂಡಲ್ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಇತರೆ ಐದು  ಮಂದಿ ಸೇರಿದಂತೆ ಒಟ್ಟು 7 ಮಂದಿ ಗಾಯಗೊಂಡಿದ್ದಾರೆ.
ಅಪಘಾತಕ್ಕೆ ಟ್ರಾಕ್ಟರ್ ಚಾಲಕನ ಬೇಜವಾಬ್ದಾರಿಯೇ ಕಾರಣ ಎಂದು ಹೇಳಲಾಗುತ್ತಿದ್ದು, ಟ್ರಾಕ್ಟರ್ ಚಾಲಕ ಎಲ್ ಯುವಿ ಕಾರಿಗೆ ಎದುರಿಗೆ ವೇಗವಾಗಿ ಚಾಲನೆ ಮಾಡುತ್ತಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಸಾಂಗ್ಲಿ  ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ದಾಖಲೆ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಾಂಗ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com