ಜಮ್ಮು-ಕಾಶ್ಮೀರದಲ್ಲಿ ಪಾಕ್ ಉದ್ಧಟತನ: ಗಡಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ ಅಧಿಕಾರಿಗಳು

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಹಾಗೂ ಅಂತರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದು, ಈ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರೆಡ್ ಅಲರ್ಟ್ ಘೋಷಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ...
ಗಡಿಭಾಗದ ಜನರನ್ನು ಸ್ಥಳಾಂತರ ಮಾಡುತ್ತಿರುವ ಭದ್ರತಾ ಸಿಬ್ಬಂದಿಗಳು
ಗಡಿಭಾಗದ ಜನರನ್ನು ಸ್ಥಳಾಂತರ ಮಾಡುತ್ತಿರುವ ಭದ್ರತಾ ಸಿಬ್ಬಂದಿಗಳು
Updated on: 
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಹಾಗೂ ಅಂತರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದು, ಈ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರೆಡ್ ಅಲರ್ಟ್ ಘೋಷಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ. 
ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ಜಮ್ಮುವಲಯದ ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ವ್ಯಾಪ್ತಿಯಲ್ಲಿರುವ ಶೈಕ್ಷಣಿಕ ಸಂಸ್ಥೆಗಳನ್ನು ಮೂರು ದಿನಗಳ ಕಾಲ ಮುಚ್ಚುವಂತೆ ಆದೇಶಿಸಲಾಗಗಿದೆ. ಅಲ್ಲದೆ, ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ ನಾಗರೀಕ ಪ್ರದೇಶಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಸುರಕ್ಷಿತ ತಾಣಗಳಿಗೆ ತೆರಳುವಂತೆ ಸ್ಥಳೀಯರಿಗೆ ಭಾರತೀಯ ಅಧಿಕಾರಿಗಳು ಕಟ್ಟೆಚ್ಚರವನ್ನು ನೀಡಿದ್ದಾರೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿ ಗಡಿ ಪ್ರದೇಶದಿಂದ ವಲಸೆ ಹೋಗಿದ್ದಾರೆಂದು ವರದಿಗಳು ತಿಳಿಸಿವೆ. 
ಪಾಕಿಸ್ತಾನ ಸೇನೆ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಸಾಂಬಾ, ಕತುವಾ ಹಾಗೂ ರಜೌರಿ ಜಿಲ್ಲೆಗಳು ಹಾಗೂ ಜಮ್ಮುವಿನ ಗಡಿ ನಿಯಂತ್ರಣ ರೇಖೆ ಹಾಗೂ ಅಂತರಾಷ್ಟ್ರೀಯ ಗಡಿಯಲ್ಲಿ ಭಾರೀ ಶೆಲ್ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ದಾಳಿಯಲ್ಲಿ ಭಾರತೀಯ ಯೋಧರು ಹಾಗೂ ಇಬ್ಬರು ಸ್ಥಳೀಯ ನಾಗರೀಕರು ಬಲಿಯಾಗಿದ್ದರು. ಅಲ್ಲದೆ, ಕೆಲ ಯೋಧರು ಸೇರಿದಂತೆ ಒಟ್ಟು 35 ಮಂದಿ ಗಾಯಗೊಂಡಿದ್ದರು. 
ಬುಧವಾರ ಕೂಡ ಜಮ್ಮುವಿನ ಬಿಎಸ್ಎಫ್ ಯೋಧ ಹಾಗೂ ಹದಿಹರೆಯದ ಬಾಲಕಿ ಪಾಕಿಸ್ತಾನ ಪಡೆಗಳ ಗುಂಡಿಗೆ ಬಲಿಯಾಗಿದ್ದರು. ಅಲ್ಲದೆ 8 ಮಂದಿ ಗಾಯಗೊಂಡಿದ್ದರು. 
ಯಾವುದೇ ತಪ್ಪು ಮಾಡದಿದ್ದರೂ ಮುಗ್ಧರನ್ನು ಹತ್ಯೆ ಮಾಡಲಾಗುತ್ತಿದೆ. ಪ್ರಸ್ತುತ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ಮುಂದುವರೆಗಿದ್ದು, ಗಡಿ ವಾತಾವರಣದ ಮೇಲೆ ಸರ್ಕಾರ ಕಣ್ಗಾವಲಿರಿಸಿದೆ. ಸರ್ಕಾರ ಹಂತದಲ್ಲಿ ಎಲ್ಲವನ್ನೂ ನೋಡಿಕೊಳ್ಳಲಾಗುತ್ತಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ, ಬಿಎಸ್ಎಫ್ ಹಾಗೂ ಪೊಲೀಸರು ಸಿದ್ಧರಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. 
ಜನರಿಗೆ ಎಚ್ಚರಿಕೆಗಳನ್ನು ನೀಡಲಾಗಿದ್ದು, ಮನೆಗಳಲ್ಲಿ ಲೈಟ್ ಗಳನ್ನು ಹಾಕದಂತೆ ತಿಳಿಸಲಾಗಿದೆ. ಅಲ್ಲದೆ, ಅನಾಮಧೇಯ ವ್ಯಕ್ತಿಗಳೊಂದಿಗೆ ಯಾವುದೇ ರೀತಿಯ ಮಾತುಕತೆ ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ. ಸೇನೆಯಿರುವ ಸ್ಥಳದ ಬಗ್ಗೆಯೂ ಯಾವುದೇ ರೀತಿ ಮಾಹಿತಿಗಳನ್ನು ಹಂಚಿಕೊಳ್ಳದಂತೆ ತಿಳಿಸಲಾಗಿದೆ. ಸೇನೆ ಅಥವಾ ಪೊಲೀಸ್ ಅಧಿಕಾರಿ ಎಂದರೂ ತಿಳಿಯದ ಮೊಬೈಲ್ ಸಂಖ್ಯೆಗಳ ಕರೆಗಳನ್ನು ಸ್ವೀಕರಿಸಿ ಮಾಹಿತಿ ಹಂಚಿಕೊಳ್ಳದಂತೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ. 
ಜನರು ತಮ್ಮ ತಮ್ಮ ವಸ್ತುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕಿದ್ದು, ಆಹಾರ ಪದಾರ್ಥಗಳು, ನೀರಿನ ವ್ಯವಸ್ಥೆಗಳನ್ನು ಜನರು ಮಾಡಿಕೊಳ್ಳಬೇಕಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಜನರನ್ನು ಬಂಕರ್ಸ್ ಗಳಿಗೆ ಸ್ಥಳಾಂತರ ಮಾಡಬಹುದು ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com