"ನಾನು ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿಗೆ ಸುಮಾರು ಮೂವತ್ತು ಪತ್ರಗಳನ್ನು ಬರೆದಿದ್ದೇನೆ. ಆದರೆ ಅವರು ಯಾವುದೇ ಒಂದು ಪತ್ರಕ್ಕೂ ಉತ್ತರ ಬರೆದಿಲ್ಲ. ಮೋದಿಗೆ ತಾವು ಪ್ರಧಾನಿ ಎಂಬ ಅಹಂ ಇದ್ದು, ಇದೇ ಕಾರಣಕ್ಕೆ ನನ್ನ ಪತ್ರಗಳಿಗೆ ಉತ್ತರಿಸಿಲ್ಲ ಎಂದು ಹೇಳಿದರು. ಇನ್ನು ಜನಲೋಕಪಾಲ್ ಜಾರಿಗಾಗಿ ತಾವು ಎರಡನೇ ಸುತ್ತಿನ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತಿದ್ದು, ಇದೇ ಮಾರ್ಚ್ 23ರಿಂದ ದೆಹಲಿಯಲ್ಲಿ ಎರಡನೇ ಸುತ್ತಿನ ಸತ್ಯಾಗ್ರಹ ಆರಂಭಿಸುವುದಾಗಿ ಹಜಾರೆ ಹೇಳಿದ್ದಾರೆ. ಅಂತೆಯೇ ಇದೊಂದು ಹಿಂದೆಂದೂ ಕಂಡುಕೇಳರಿಯದ ಸತ್ಯಾಗ್ರಹವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ. ಈ ಸಭೆ ಮತ್ತು ಸತ್ಯಾಗ್ರಹಗಳ ಮೂಲಕ ಮತಗಳನ್ನು ಪಡೆಯುವ ಯಾವುದೇ ಇರಾದೆಯು ನನಗಿಲ್ಲ. ಜನಲೋಕಪಾಲ್‌ಗಾಗಿ ನಡೆಸಿದಂಥ ಬೃಹತ್ ಸತ್ಯಾಗ್ರಹದ ಮಾದರಿಯಲ್ಲೇ ರೈತರ ಬಗೆಗಿನ ಸತ್ಯಾಗ್ರಹವೂ ಇರಲಿದೆ ಎಂದು ಹಜಾರೆ ಹೇಳಿದ್ದಾರೆ.