20 ಶಾಸಕರ ಅನರ್ಹತೆ ಪ್ರಶ್ನಿಸಿ ಹೈಕೋರ್ಟಿಗೆ ಎಎಪಿ ಶಾಸಕರ ಅರ್ಜಿ

ಲಾಭದಾಯಕ ಹುದ್ದೆ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸಲ್ಲಿಸಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿ ಅಂಕಿತ ಹಾಕಿರುವ ಸಂಬಂಧ ದೆಹಲಿಯ ಅನರ್ಹ 20 ಶಾಸಕರು ಹೈಕೋರ್ಟಿಗೆ ಇಂದು ಅರ್ಜಿ ಸಲ್ಲಿಸಿದ್ದಾರೆ.
ಲಾಭದಾಯಕ ಹುದ್ದೆ  ಹಿನ್ನೆಲೆಯಲ್ಲಿ ಶಾಸಕ ಸ್ಱಾನದಿಂದ ಅನರ್ಹಗೊಂಡಿರುವ 20 ಶಾಸಕರ ಚಿತ್ರ
ಲಾಭದಾಯಕ ಹುದ್ದೆ ಹಿನ್ನೆಲೆಯಲ್ಲಿ ಶಾಸಕ ಸ್ಱಾನದಿಂದ ಅನರ್ಹಗೊಂಡಿರುವ 20 ಶಾಸಕರ ಚಿತ್ರ
Updated on: 

ನವದೆಹಲಿ: ಲಾಭದಾಯಕ ಹುದ್ದೆ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ  ಸಲ್ಲಿಸಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿ ಅಂಕಿತ ಹಾಕಿರುವುದನ್ನ ಪ್ರಶ್ನಿಸಿ  ದೆಹಲಿಯ ಅನರ್ಹ  20 ಶಾಸಕರು ಹೈಕೋರ್ಟಿಗೆ ಇಂದು  ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಯನ್ನು ನಾಳೆ ಕೈಗೆತ್ತಿಕೊಳ್ಳಲು  ಹೈಕೋರ್ಟ್ ಸಮ್ಮತಿ ಸೂಚಿಸಿದೆ.

ದೆಹಲಿ ಸರ್ಕಾರದಲ್ಲಿ ಸಂಸದೀಯ ಹುದ್ದೆ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ಶಿಫಾರಸ್ಸಿಗೆ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದರು.

ಈ  ಸಂಬಂಧ  ನಿನ್ನೆ ಅನರ್ಹ 20 ಶಾಸಕರು  ಹೈಕೋರ್ಟಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿ, ನಂತರ ವಾಪಾಸ್ ಪಡೆದುಕೊಂಡಿದ್ದರು.

ಶಾಸಕರ ಅನರ್ಹತೆ ವಿಷಯದಲ್ಲಿ ಚುನಾವಣಾ ಆಯೋಗದ ನಡೆ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com