ಪಾಟ್ನಾ: ಅಘತಕಾರಿ ಘಟನೆಯೊಂದರಲ್ಲಿ 19 ವರ್ಷದ ಯುವಕ ಗರ್ಲ್ ಫ್ರೆಂಡ್ ಜೊತೆ ವಿಡಿಯೋ ಚಾಟ್ ಮಾಡುತ್ತಾ, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ವಾಟ್ಸ್ ಆಪ್ ವಿಡಿಯೋ ಕರೆಯಲ್ಲಿ ಯುವತಿಯೊಂದಿಗೆ ಮಾತನಾಡುತ್ತಿದ್ದ ಯುವಕ, ಆಕಾಶ್ ಕುಮಾರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ. ಮೃತ ದೇಹದ ಪಕ್ಕದಲ್ಲಿ ಪಿಸ್ತೂಲ್ ಸಹ ಪತ್ತೆಯಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ಯುವಕನಿಗೆ ಯುವತಿಯೊಂದಿಗಿನ ಸಖ್ಯ ತೊರೆಯುವಂತೆ ಪೋಷಕರು ಒತ್ತಾಯ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.