ಮೂಲಗಳ ಪ್ರಕಾರ ವಾಯುವ್ಯ ದೆಹಲಿಯ ನೇತಾಜಿ ಸುಭಾಷ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಯನ್ನು ಕೂಡಲೇ ಪೊಲೀಸರು ವಶಕ್ಕ ಪಡೆದಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ಕುಡಿದ ಮತ್ತಿನಲ್ಲಿ ಕೃತ್ಯವೆಸಗಿರುವ ಕುರಿತು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮಗುವಿನ ಪೋಷಕರು, ತಾವು ದಿನಗೂಲಿ ನೌಕರರಾಗಿದ್ದು, ಕೆಲಸ ನಿಮಿತ್ತ ಮಗುವನ್ನು ತಮ್ಮ ಅತ್ತಿಗೆಯ ಬಳಿ ಬಿಟ್ಟು ತೆರಳಿದ್ದರಂತೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆಕೆಯ ಪುತ್ರ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.