ಕೇಂದ್ರ ಬಜೆಟ್ ಬಜೆಟ್ 2018ರ ಮಂಡನೆಗೆ ಕ್ಷಣಗಣನೆ ಆರಂಭ, ಎಲ್ಲರ ಚಿತ್ತ ಜೇಟ್ಲಿಯತ್ತ

2018ನೇ ಸಾಲಿನ ಕೇಂದ್ರ ಬಜೆಟ್ ಗೆ ಕ್ಷಣಗಣನೆ ಆರಂಭವಾಗಿದ್ದು, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2018 ಸಾಲಿನ ಆಯವ್ಯಯಪತ್ರವನ್ನು ಸಂಸತ್ ನಲ್ಲಿ ಮಂಡನೆ ಮಾಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: 2018ನೇ ಸಾಲಿನ ಕೇಂದ್ರ ಬಜೆಟ್ ಗೆ ಕ್ಷಣಗಣನೆ ಆರಂಭವಾಗಿದ್ದು, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2018 ಸಾಲಿನ ಆಯವ್ಯಯಪತ್ರವನ್ನು ಸಂಸತ್ ನಲ್ಲಿ ಮಂಡನೆ ಮಾಡಲಿದ್ದಾರೆ.
ಈ ಬಾರಿಯ ಬಜೆಟ್ ಹಲವು ನಿರೀಕ್ಷೆಗಳನ್ನು ಮೂಡಿಸಿದ್ದು, ವೇತನ ಪಡೆಯುವ ಉದ್ಯೋಗಸ್ಥರಿಗೆ ಅರುಣ್ ಜೇಟ್ಲಿ ಬಜೆಟ್ ನಲ್ಲಿ ಸಿಹಿ ಸುದ್ದಿ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಈ ಹಿಂದೆ ಮನ್ ಕಿ ಬಾತ್ ನಲ್ಲಿ  ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಾರಿಯ ಬಜೆಟ್ ಜನಪ್ರಿಯವಲ್ಲ.. ಬದಲಿಗೆ ಜನಪರವಾಗಿರುತ್ತದೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಪ್ರಮುಖವಾಗಿ ಈ ಬಾರಿಯ ಬಜೆಟ್ ಆರ್ಥಿಕ  ಸಂಸ್ಥೆಗಳನ್ನು ಬಲಪಡಿಸುವ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. 
ಅಂತೆಯೇ ಆದಾಯ ತೆರಿಗೆ ಮಿತಿ ಹೆಚ್ಚಳದ ಮೂಲಕ ಮಧ್ಯಮವರ್ಗದ ಜನರಿಗೂ ಸಿಹಿಸುದ್ದಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದಲ್ಗದೆ ಕೃಷಿ ಕ್ಷೇತ್ರ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಅಭಿವೃದ್ಧಿಯ ಕಡೆಗೆ ಹೆಚ್ಚು ಒತ್ತು  ನೀಡುವ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. 
ಫೆಬ್ರವರಿ ಅಂತ್ಯಕ್ಕೆ ಬಜೆಟ್‌ ಮಂಡಿಸುವ ಹಳೆಯ ಸಂಪ್ರ ದಾಯವನ್ನು ಮೀರಿ, ತಿಂಗಳ ಆರಂಭದಲ್ಲೇ ಮಂಡಿಸಲು ನಿರ್ಧರಿಸಿರುವ ಕೇಂದ್ರ ಸರಕಾರ, ಈ ಬಾರಿ ಮುಂಬರುವ ಎಂಟು ರಾಜ್ಯಗಳ ಚುನಾವಣೆ ಹಾಗೂ ಮುಂದಿನ  ವರ್ಷದ ಸಾರ್ವತ್ರಿಕ ಚುನಾವಣೆಯ ದೃಷ್ಟಿಯನ್ನು ಇಟ್ಟುಕೊಳ್ಳಲಿದೆ. ಗ್ರಾಮೀಣ ಪ್ರದೇಶಗಳಿಗೆ ಹೊಸ ಯೋಜನೆಗಳು, ನರೇಗಾ, ಗ್ರಾಮೀಣ ವಸತಿ ಯೋಜನೆಗಳು, ನೀರಾವರಿ ಯೋಜನೆ ಮತ್ತು ಬೆಳೆ ವಿಮೆಗೆ ಹೆಚ್ಚಿನ ಹಣಕಾಸು  ವಿನಿಯೋಗಿಸುವ ಭರವಸೆ  ವ್ಯಕ್ತವಾಗ ಬಹುದು ಎಂದು ನಿರೀಕ್ಷಿಸಲಾಗಿದೆ.
ಒಟ್ಟಾರೆ ಈ ಎಲ್ಲ ಕುತೂಹಲಗಳಿಗೂ ಇನ್ನು ಕೆಲವೇ ಗಂಟೆಗಳಲ್ಲಿ ಕೇಂದ್ರ ವಿತ್ತ ಸಚಿವ ತೆರೆ ಎಳೆಯಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com