ಮೂಲಗಳ ಪ್ರಕಾರ ಈಗಾಗಲೇ ನೀರವ್ ಮೋದಿ ಗ್ರಾಹಕರಿಗೆ ಆದಾಯತೆರಿಗೆ ಇಲಾಖೆಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಲ ನಿರ್ಧರಿಸಿದ್ದು, ದುಬಾರಿ ಆಭರಣಗಳನ್ನು ಖರೀದಿ ಮಾಡಿದ ಹಣದ ಮೂಲದ ಕುರಿತು ದಾಖಲೆ ಸಲ್ಲಿಸುವಂತೆ ಸೂಚನೆ ನೀಡಲಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಈಗಾಗಲೇ ದಾಖಲೆಗಳನ್ನು ಸಂಗ್ರಹಿಸಿದ್ದು, ನೀರವ್ ಮೋದಿ ಆಭರಣ ಸಂಸ್ಥೆಯಿಂದ ದುಬಾರಿ ಆಭರಣಗಳನ್ನು (high-end jewellery)ಗಳನ್ನು ಖರೀದಿ ಮಾಡಿದ ಗ್ರಾಹಕರನ್ನು ಗುರಿಯಾಗಿಸಿಕೊಂಡು ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ.