ಭಯೋತ್ಪಾದನಾ ವಿರೋಧಿ ಎಸ್ ಸಿಒ ಡ್ರಿಲ್ ನಲ್ಲಿ ಪಾಕಿಸ್ತಾನದ ಸೇನೆ!

ರಷ್ಯಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಆಯೋಜಿಸಿರುವ ಭಯೋತ್ಪಾದನಾ ವಿರೋಧಿ ಡ್ರಿಲ್ ನಲ್ಲಿ ಭಾರತದೊಂದಿಗೆ ಪಾಕಿಸ್ತಾನದ ಸೇನೆಯೂ ಭಾಗಿಯಾಗಲಿದೆ.
ಪಾಕಿಸ್ತಾನ
ಪಾಕಿಸ್ತಾನ
ರಷ್ಯಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಆಯೋಜಿಸಿರುವ ಭಯೋತ್ಪಾದನಾ ವಿರೋಧಿ ಡ್ರಿಲ್ ನಲ್ಲಿ ಭಾರತದೊಂದಿಗೆ ಪಾಕಿಸ್ತಾನದ ಸೇನೆಯೂ ಭಾಗಿಯಾಗಲಿದೆ. 
ಸದಸ್ಯ ರಾಷ್ಟ್ರಗಳ ನಡುವೆ ಭಯೋತ್ಪಾದನೆಯನ್ನು ತಡೆಗಟ್ಟಲು ಸಹಕಾರ ವೃದ್ಧಿಯ ಯೋಜನೆಯಿಂದ ಶಾಂಘೈ ಸಹಕಾರ ಸಂಸ್ಥೆ ಭಯೋತ್ಪಾದನಾ ಡ್ರಿಲ್ ಆಯೋಜಿಸಿದೆ. ಆಗಸ್ಟ್ 20-29 ರ ವರೆಗೆ ನಡೆಯಲಿರುವ ಈ ತಾಲೀಮಿನಲ್ಲಿ ಭಾರತದಿಂದ ಸೇನಾ ಪಡೆ ಹಾಗೂ ವಾಯುಪಡೆಯ ಸುಮಾರು 200 ಯೋಧರು  ಭಾಗಿಯಾಗಲಿದ್ದಾರೆ.
ರಷ್ಯಾ, ಚೀನಾ, ಕಿರ್ಗಿಜ್ ರಿಪಬ್ಲಿಕ್, ತಜಾಕಿಸ್ಥಾನ್, ಉಜ್ಬೇಕಿಸ್ತಾನ್ ರಾಷ್ಟ್ರಗಳು ಡ್ರಿಲ್ ನಲ್ಲಿ ಭಾಗವಹಿಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com