ಡೇವಿಡ್ ಕೋಲ್‌ಮನ್ ಹೆಡ್ಲಿ
ಡೇವಿಡ್ ಕೋಲ್‌ಮನ್ ಹೆಡ್ಲಿ

ಅಮೆರಿಕ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ: ಗಂಭೀರ ಸ್ಥಿತಿಯಲ್ಲಿ 26/11 ರ ಸೂತ್ರಧಾರ ಡೇವಿಡ್ ಕೋಲ್‌ಮನ್ ಹೆಡ್ಲಿ!

26/11 ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಹೆಡ್ಲಿ ಮೇಲೆ ಅಮೆರಿಕ ಜೈಲಿನಲ್ಲಿ ದಾಳಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ.
ಚಿಕಾಗೊ: 26/11  ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಹೆಡ್ಲಿ ಮೇಲೆ ಅಮೆರಿಕ ಜೈಲಿನಲ್ಲಿ ದಾಳಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ. 
ಚಿಕಾಗೊದಲ್ಲಿರುವ ಮೆಟ್ರೋಪಾಲಿಟನ್ ಕರೆಕ್ಷನ್ ಸೆಂಟರ್ ನಲ್ಲಿ ಇಬ್ಬರು ಸಹಖೈದಿಗಳಿಂದ ಹಲ್ಲೆಗೊಳಗಾಗಿರುವ ಹೆಡ್ಲಿಯನ್ನು ನಾರ್ತ್ ಇವಾನ್ಸ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜು.8 ರಂದು ಇಬ್ಬರು ಸಹ ಖೈದಿಗಳು ಹೆಡ್ಲಿಯನ್ನು ಹಿಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಮೇಲೆಯೂ ಈ ಇಬ್ಬರು ಖೈದಿಗಳು ಹಲ್ಲೆ ನಡೆಸಿದ್ದು, ಇದನ್ನು ಒಪ್ಪಿಕೊಂಡಿದ್ದಾರೆ. 
26/11 ರ ಮುಂಬೈ ದಾಳಿಯಲ್ಲಿ ತನ್ನ ಕೈವಾಡ ಇರುವುದನ್ನು 2016 ರ ಫೆಬ್ರವರಿಯಲ್ಲಿ ಹೆಡ್ಲಿ ಮುಂಬೈ ಕೋರ್ಟ್ ನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. 

Related Stories

No stories found.

Advertisement

X
Kannada Prabha
www.kannadaprabha.com