ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್ ಸಂಸತ್ತಿಗೆ ವರದಿ ನೀಡಿದ್ದು, 2018ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಮಾಡಿಕೊಳ್ಳಲಾದ ತೈಲ ಆಮದಿನ ಅಂಕಿಅಂಶಗಳ ಪ್ರಕಾರ, ಇರಾಕ್ ನಿಂದ 7.2 ದಶಲಕ್ಷ ಮೆಟ್ರಿಕ್ ಟನ್, ಇರಾನ್‌ನಿಂದ 5.6 ದಶಲಕ್ಷ ಮೆಟ್ರಿಕ್ ಟನ್ ಹಾಗು ಸೌದಿ ಅರೇಬಿಯಾದಿಂದ 5.2 ದಶಲಕ್ಷ ಮೆಟ್ರಿಕ್ ಟನ್ ನಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ.