ಬ್ರಿಕ್ಸ್ ಸಮಾವೇಶ: ಡೋಕ್ಲಾಮ್ ವಿಚಾರ ಪ್ರಸ್ತಾಪಿಸದ ಪ್ರಧಾನಿ ಮೋದಿ ವಿರುದ್ದ ಕಾಂಗ್ರೆಸ್ ವಾಗ್ದಾಳಿ

ಚೀನಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರೊಂದಿಗೆ ಡೋಕ್ಲಾಮ್ ವಿಚಾರ ಪ್ರಸ್ತಾಪ ಮಾಡದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಶನಿವಾರ ತೀವ್ರವಾಗಿ ಕಿಡಿಕಾರಿದೆ...
ಡೋಕ್ಲಾಮ್
ಡೋಕ್ಲಾಮ್
ನವದೆಹಲಿ: ಚೀನಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರೊಂದಿಗೆ ಡೋಕ್ಲಾಮ್ ವಿಚಾರ ಪ್ರಸ್ತಾಪ ಮಾಡದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಶನಿವಾರ ತೀವ್ರವಾಗಿ ಕಿಡಿಕಾರಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದ್ದಾರೆ. ಆದರೆ, ಡೋಕ್ಲಾಮ್ ವಿಚಾರದ ಬಗ್ಗೆ ಮಾತನಾಡುವುದನ್ನೇ ಮೋದಿ ಮರೆತು ಹೋಗಿದ್ದಾರೆ. 56 ಇಂಚಿನ ಎದೆಯನ್ನು ಸರ್ಕಾರ ಎಂದಿಗೆ ತೋರಿಸುತ್ತದೆ? ದೇಶದ ಭದ್ರತೆ ಹಾಗೂ ದೇಶದ ಗಡಿ ವಿಚಾರಗಳ ಕುರಿತು ಎಂದಿಗೆ ಧೈರ್ಯ ತೋರುತ್ತದೆ? 132 ಕೋಟಿ ದೇಶದ ಜನತೆ ಇದನ್ನು ತಿಳಿಯಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. 
ಡೋಕ್ಲಾಮ್ ಪ್ರದೇಶದಲ್ಲಿ ಚೀನಾ ಸದ್ದಿಲ್ಲದೆ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅಮೆರಿಕಾದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಇದು ದೇಶಕ್ಕೆ ನೇರ ಬೆದರಿಕೆಯಾಗಿದ್ದು, ದೇಶದ ಭದ್ರತೆಗೆ ಸವಾಲಾಗಿದೆ. ಉತ್ತರ ಡೋಕ್ಲಾಮ್ ಮತ್ತು ದಕ್ಷಿಣ ಡೋಕ್ಲಾಮ್ ನ ಸಿಲಿಗೂರಿ ಕಾರಿಡಾರ್ ನಲ್ಲಿ ಚೀನಾ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ರಸ್ತೆಯನ್ನೂ ಕೂಡ ನಿರ್ಮಾಣ ಮಾಡಿದೆ. ಆದರೆ, ಪ್ರಧಾನಮಂತ್ರಿಯಾಗಲೀ, ರಕ್ಷಣಾ ಸಚಿವರಾಗಲೀ ಈ ಬಗ್ಗೆ ಏನನ್ನೂ ಮಾತನಾಡುತ್ತಿಲ್ಲ. 
56 ಇಂಚಿನ ಎದೆ ಹಾಗೂ ಧೈರ್ಯವನ್ನು ತೋರಿಸುತ್ತಿರುವವರು ಚೀನಾವನ್ನು ಎದುರು ಹಾಕಿಕೊಳ್ಳುವ ಧೈರ್ಯವನ್ನು ಮಾಡುತ್ತಿಲ್ಲ. ದೇಶದ ಭದ್ರತೆ ಕುರಿತಂತೆ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಯಾವುದೇ ತಂತ್ರಗಳಿಲ್ಲದೆಯೇ ಚೀನಾಗೆ ಹೋಗಿರುವ ಪ್ರಧಾನಿ ಮೋದಿವರು ದೇಶದ ಭದ್ರತೆಗೆ ಸಂಬಂಧಿಸಿದ ಡೋಕ್ಲಾಮ್ ವಿಚಾರದ ಕುರಿತು ಮಾತನಾಡುವುದನ್ನು ಮರೆತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ. 
ಭೂತಾನ್ ಜೊತೆಗೆ ಚೀನಾ ಯಾವುದೇ ರೀತಿಯ ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿಲ್ಲ. ಆದರೂ, ಚೀನಾ ಭೂತಾನ್'ಗೆ ತೆರಳಿ ಭಾರತವನ್ನು ಭಾಗಿ ಮಾಡಿಕೊಳ್ಳದೆಯೇ ಡೋಕ್ಲಾಮ್ ವಿಚಾರದ ಬಗ್ಗೆ ಮಾತುಕತೆ ನಡೆಸಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com