ದೇಶ

ಅಸ್ಸಾಂ :ನಾಳೆ ಎನ್ ಆರ್ ಸಿ ಅಂತಿಮ ಕರಡು ಬಿಡುಗಡೆ : ಬಿಗಿ ಭದ್ರತೆ

ಬಿಗಿ ಭದ್ರತೆ ನಡುವೆ ನಾಳೆ ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿ- ಎನ್ ಆರ್ ಸಿ ಅಂತಿಮ ಕರಡು ಬಿಡುಗಡೆಯಾಗಲಿದೆ.

ಅಸ್ಸಾಂ :ನಾಳೆ ಎನ್ ಆರ್ ಸಿ ಅಂತಿಮ ಕರಡು ಬಿಡುಗಡೆ : ಬಿಗಿ ಭದ್ರತೆ
ಸಾಂದರ್ಭಿಕ
Published On :

ಅಸ್ಸಾಂ: ಬಿಗಿ ಭದ್ರತೆ ನಡುವೆ ನಾಳೆ ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿ- ಎನ್ ಆರ್ ಸಿ ಅಂತಿಮ ಕರಡು ಬಿಡುಗಡೆಯಾಗಲಿದೆ.

ನಾಳೆ ಮಧ್ಯಾಹ್ನ  ರಾಜ್ಯಾದ್ಯಂತ ಎಲ್ಲಾ ಎನ್ ಆರ್ ಸಿ ಸೇವಾ ಕೇಂದ್ರಗಳಲ್ಲಿ ಕರಡು ಬಿಡುಗಡೆಯಾಗಲಿದ್ದು,  ಅರ್ಜಿದಾರರ ಹೆಸರು, ವಿಳಾಸ , ಹಾಗೂ ಪೋಟೋವನ್ನು ಪರಿಶೀಲಿಸಬಹುದೆಂದು ಎನ್ ಆರ್ ಸಿ   ಸಮನ್ವಯಾಧಿಕಾರಿ  ಪ್ರತೀಕ್ ಹಜಿಲಾ ಹೇಳಿದ್ದಾರೆ.

1975 ಮಾರ್ಚ್ 25 ರ ಮುಂಚಿನಿಂದಲೂ ಅಸ್ಸಾಂನಲ್ಲಿ ವಾಸಿಸುತ್ತಿರುವ ಎಲ್ಲಾ ಭಾರತೀಯ ನಾಗರಿಕರ ಹೆಸರುಗಳು ಎನ್ ಆರ್ ಸಿ ಪಟ್ಟಿಯಲ್ಲಿ ಇರಲಿವೆ.

 ಈ ಮಧ್ಯೆ  ಕಾನೂನು ಸುವ್ಯವಸ್ಥೆ ಪಾಲನೆಗಾಗಿ ರಾಜ್ಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ  ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಯಾ ಜಿಲ್ಲೆಯಲ್ಲಿನ ವರಿಷ್ಠಾಧಿಕಾರಿಗಳು  ಸೂಕ್ಷ್ಮ ಪ್ರದೇಶಗಳನ್ನು ಪತ್ತೆ ಹಚ್ಚಿದ್ದು, ಅಂತಹ ಕಡೆಗಳಿಗೆ  ಪರಿಸ್ಥಿತಿ ಬಿಗಡಾಯಿಸದಂತೆ ವಿಶೇಷವಾಗಿ  ವದಂತಿಗಳು ಹಬ್ಬದಂತೆ ಕ್ರಮಕೈಗೊಳ್ಳಲಾಗಿದೆ. ಅಸ್ಸಾಂ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಭದ್ರತೆಗಾಗಿ ಕೇಂದ್ರೀಯ ಅರಸೇನಾ ಪಡೆಯ 220 ತುಕಡಿಗಳನ್ನು ನಿಯೋಜಿಸಲಾಗಿದೆ.

ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್  ಉನ್ನತ ಮಟ್ಟದ ಸಭೆ ನಡೆಸಿದ್ದು, ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಸರಿಯಾದ ಮಾಹಿತಿ ನೀಡುವಂತೆ  ಅಧಿಕಾರಿಗಳಿಗೆ ತಿಳಿಸಿದ್ದಾರೆ. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇಲ್ಲದವರು ಮತ್ತೆ ಸೇವಾ ಕೇಂದ್ರದಲ್ಲಿ  ಆಗಸ್ಟ್ 7 ರಿಂದ ಸೆಪ್ಟೆಂಬರ್ 28ರವರೆಗೂ ಅರ್ಜಿ ಸಲ್ಲಿಸಬಹುದು ಎಂದು  ಹಜಿಲಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.