ಬೆಂಗಳೂರು: ವಿಶ್ವದ ಅತ್ಯುತ್ತಮ ಥೀಮ್ ಪಾರ್ಕ್'ನಲ್ಲಿ ವಂಡರ್'ಲಾಗೆ 7ನೇ ಸ್ಥಾನ

ಪ್ರವಾಸ ಸಲಹಾ ಸಂಸ್ಥೆಯಾದ ಟ್ರಿಪ್ ಅಡ್ವೈಸರ್ 2018ನೇ ಸಾಲಿನಲ್ಲಿ ಅತ್ಯುತ್ತಮ ಅಮ್ಯೂಸ್'ಮೆಂಟ್ ಪಾರ್ಕ್ ಮತ್ತು ಥೀಮ್ ಪಾರ್ಕ್'ಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಬೆಂಗಳೂರಿನ ವಂಡಲ್ ಲಾ ವಿಶ್ವದಲ್ಲಿಯೇ 7ನೇ ಅತ್ಯುತ್ತಮ ಅಮ್ಯೂಸ್'ಮೆಂಟ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಪ್ರವಾಸ ಸಲಹಾ ಸಂಸ್ಥೆಯಾದ ಟ್ರಿಪ್ ಅಡ್ವೈಸರ್ 2018ನೇ ಸಾಲಿನಲ್ಲಿ ಅತ್ಯುತ್ತಮ ಅಮ್ಯೂಸ್'ಮೆಂಟ್ ಪಾರ್ಕ್ ಮತ್ತು ಥೀಮ್ ಪಾರ್ಕ್'ಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಬೆಂಗಳೂರಿನ ವಂಡಲ್ ಲಾ ವಿಶ್ವದಲ್ಲಿಯೇ 7ನೇ ಅತ್ಯುತ್ತಮ ಅಮ್ಯೂಸ್'ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
ಪಟ್ಟಿಯಲ್ಲಿ ಹೈದರಾಬಾದ್'ನ ರಾಮೋಜಿ ಫಿಲ್ಮ್ ಸಿಟಿ ಥೀಮ್ ಪಾರ್ಕ್ 4ನೇ ಸ್ಥಾನ ಪಡೆದುಕೊಂಡಿದೆ. ಗ್ರಾಹಕರ ಪ್ರತಿಕ್ರಿಯೆ ಹಾಗೂ ಬುಕ್ಕಿಂಗ್ ಗಳ ಆಧಾರದಲ್ಲಿ ಈ ಸೂಚ್ಯಾಂಕ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ. 
 ಸೆಂಟೋಸಾ ದ್ವೀಪದಲ್ಲಿರುವ ಯೂನಿವರ್ಸಲೆ ಸ್ಟುಡಿಯೋ ಸಿಂಗಾಪುರ, ಏಷ್ಯಾ ಪಟ್ಟಿಯಲ್ಲಿ 1ನೇ ಸ್ಥಾನ ಪಡೆದುಕೊಂಡಿದೆ. ಜಾಗತಿಕ ಪಟ್ಟಿಯಲ್ಲಿ ಅಮೆರಿಕಾದ ಒರ್ಲಾಂಡೋದ ಯೂನಿವರ್ಸಲ್ಸ್ ಐಲ್ಯಾಂಡ್ ಆಫ್ ಅಡ್ವೆಂಚರ್ ಪ್ರಥಮ ಸ್ಥಾನದಲ್ಲಿದೆ. 
ವಿಶ್ವದಾದ್ಯಂತದ ಅಮ್ಯೂಸ್'ಮೆಂಟ್ ಪಾರ್ಕ್ ಗಳು ಮತ್ತು ವಾಟರ್ ಪಾರ್ಕ್'ಗಳ ಒಂದು ವರ್ಷದ ರೇಟಿಂಗ್ ಮತ್ತು ಪ್ರತಿಕ್ರಿಯೆಗಳ ಗುಣಮಟ್ಟ ಮತ್ತು ಗಾತ್ರವನ್ನು ಬಳಸಿಕೊಂಡು ಪಟ್ಟಿಯನ್ನು ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ. 
ಏಷ್ಯಾದ ಅತ್ಯುತ್ತಮ ಥೀಮ್ ಪಾರ್ಕ್ ಗಳ ಪೈಕಿ, ಸಾಕಷ್ಟು ಸಂಖ್ಯೆಯ ಭಾರತದ ಪಾರ್ಕ್ ಗಳು ಆಯ್ಕೆಯಾಗಿರುವುದು ಸಂತೋಷದ ವಿಚಾರ. ಅಂತರಾಷ್ಟ್ರೀಯ ಗುಣಮಟ್ಟದ ಆಧಾರದಲ್ಲಿ ಇವುಗಳನ್ನು ನಿರ್ವಹಿಸಲಾಗುತ್ತಿದೆ ಮತ್ತು ಇದು ಪ್ರವಾಸಿಗರಲ್ಲಿ ಅವುಗಳ ಜನಪ್ರಿಯತೆಯ ಮಟ್ಟವನ್ನು ತೋರಿಸುತ್ತಿದೆ ಎಂದು ಟ್ರಿಪ್ ಅಡ್ವೈಸರ್ ಹೇಳಿದೆ. 
ಇದೇ ಪಟ್ಟಿಯಲ್ಲಿ ಕೊಚ್ಚಿಯ ವಂಡರ್ ಲಾ 11, ಮುಂಬೈಯ ಎಸ್ಸೆಲ್ ವರ್ಲ್ಡ್ 15, ಕೋಲ್ಕತಾದ ಸೈನ್ಸ್'ಸಿಟಿ 18, ನವದೆಹಲಿಯ ಅಡ್ವೆಂಚರ್ ಐಲ್ಯಾಂಡ್ 19ನೇ ಸ್ಥಾನದಲ್ಲಿವೆ. ಏಷ್ಯಾ ಪಟ್ಟಿಯಲ್ಲಿ ಹಾಂಕಾಂಗ್ ಡಿಸ್ನಿ ಲ್ಯಾಂಡ್ 2, ಒಸಾಕಾದ ಯುನಿವರ್ಸಲ್ ಸ್ಟುಡಿಯೋ ಜಪಾನ್ 3ನೇ ಸ್ಥಾನದಲ್ಲಿವೆ. ಜಾಗತಿಕ ಪಟ್ಟಿಯಲ್ಲಿ ಒರ್ಲಾಂಡೋದ ಮ್ಯಾಜಿಕ್ ಕಿಂಗ್ ಡಂ, ಫ್ರಾನ್ಸ್ ಪಿ ಪುಯ್ ಡು ಫೌಲಿಸ್ ಎಪಿಸ್ಸೆಸ್ 3ನೇ ಸ್ಥಾನದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com