ತ್ರಿಪುರಾದಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿಯ ಅಗತ್ಯತೆ ಇಲ್ಲ: ಸಿಎಂ ಬಿಪ್ಲಬ್ ದೇಬ್

ತ್ರಿಪುರಾದಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ ಸಿ) ಅಗತ್ಯತೆ ಇಲ್ಲ ಎಂದು ಸಿಎಂ ಬಿಪ್ಲಬ್ ದೇಬ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಗರ್ತಲಾ: ತ್ರಿಪುರಾದಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ ಸಿ) ಅಗತ್ಯತೆ ಇಲ್ಲ ಎಂದು ಸಿಎಂ ಬಿಪ್ಲಬ್ ದೇಬ್ ಹೇಳಿದ್ದಾರೆ.
ಪ್ರಸ್ತುತ ಅಸ್ಸಾಂನಲ್ಲಿ ನಡೆದ ಎನ್ ಆರ್ ಸಿ ಕಾರ್ಯಕ್ರಮದಿಂದಾಗಿ ಸುಮಾರು 40ಲಕ್ಷಕ್ಕೂ ಅಧಿಕ ನಿವಾಸಿಗಳು ಅಕ್ರಮ ವಲಸಿಗರು ಎಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಅವರನ್ನು ಅಸ್ಸಾಂ ನಿಂದ ಹೊರಹಾಕುವ ಆತಂಕ ಎದುರಾಗಿದೆ. ಈ ಹಿನ್ನಲೆಯಲ್ಲಿ ಅಸ್ಸಾಂನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತಾ ಕ್ರಮವಾಗಿ ಸೇನೆ, ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಅವರು, ಎನ್ಆರ್ ಸಿ ವಿಚಾರ ದೊಡ್ಡ ಸಮಸ್ಯೆಯೇ ಅಲ್ಲ. ಕೆಲ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸುತ್ತಿದ್ದಾರೆ. ಆದರೆ ಅಸ್ಸಾಂ ಸಿಎಂ ಸರ್ಬಾನಂದ ಸೋನಾವಾಲ್ ಅವರು ಈ ಸಮಸ್ಯೆಗೆ ಖಂಡಿತಾ ಪರಿಷ್ಕಾರ ಕಂಡುಹಿಡಿಯುತ್ತಾರೆ ಎಂದು ಹೇಳಿದರು.
ಅಂತೆಯೇ ತ್ರಿಪುರಾದಲ್ಲಿ ಎನ್ ಆರ್ ಸಿ ಅಗತ್ಯವಿಲ್ಲ ಎಂದು ಹೇಳಿದ ಬಿಪ್ಲಬ್ ದೇಬ್, ತ್ರಿಪುರಾದಲ್ಲಿ ಎಲ್ಲವೂ ವ್ಯವಸ್ಥಿತವಾಗಿದ್ದು. ಎನ್ ಆರ್ ಸಿ ಅಗತ್ಯತೆ ಇಲ್ಲ ಎಂದೆನಿಸುತ್ತದೆ ಎಂದು ಹೇಳಿದ್ದಾರೆ.
ಇನ್ನು ಇದೇ ಎನ್ ಆರ್ ಸಿ ವಿಚಾರ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದ್ದು. ಬರೊಬ್ಬರಿ 40ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರು ಬಂದಿದ್ದು ಹೇಗೆ ಎಂಬ ಪ್ರಶ್ವೆ ಎದ್ದಿದೆ. ಅಂತೆಯೇ ದಶಕಗಳಿಂದಲೂ ಇಲ್ಲಿಯೇ ನೆಲೆಕಂಡುಕೊಂಡಿರುವ ಅಕ್ರಮ ವಲಸಿಗರನ್ನು ಮತ್ತೆ ಹೊರಗೆ ಕಳುಹಿಸುವುದೂ ಕೂಡ ಸಮಸ್ಯೆಯಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com